- July 31, 2010
- Posted by: admin
- Category: Achievements
ಜಿಲ್ಲೆಗೆ ದಕ್ಕಿದ ರೈಲ್ವೆ ಯೋಜನೆಗಳು : | |||||
ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ವಿಸ್ತಾರವಾದ ರೈಲು ಮಾರ್ಗ ಇರುವ ದೇಶ ಭಾರತ. ಈ ಹೆಗ್ಗಳಿಕೆಯಿದ್ದರೂ ದಕ್ಷಿಣ ಭಾರತದಲ್ಲಿ ರೈಲು ಮಾರ್ಗಗಳ ಅಭಿವೃದ್ಧಿಯಾಗಿರುವುದು ಕಡಿಮೆ. ಶಿವಮೊಗ್ಗ ಜಿಲ್ಲೆಯಂತೂ ರೈಲ್ವೆ ಸಂಬಂಧಿ ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬುದನ್ನು ಮನಗಂಡು ಆ ದಿಶೆಯಲ್ಲಿ ಹಲವಾರು ಪ್ರಯತ್ನ ಮಾಡಲಾಗಿದೆ. ಮುಖ್ಯವಾಗಿ ಶಿವಮೊಗ್ಗ ಜನತೆಯ ಬಹು ದಿನದ ಬೇಡಿಕೆಯಾಗಿದ್ದ ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲಿನ ಮಂಜೂರಾತಿಗೆ ಮಾನ್ಯ ಮುಖ್ಯಮಂತ್ರಿಗಳ ನಿರಂತರ ಬೆಂಬಲ, ಕೇಂದ್ರ ರೈಲ್ವೆ ಸಚಿವರಾದ ಕು. ಮಮತಾ ಬ್ಯಾನರ್ಜಿ ಹಾಗೂ ಕರ್ನಾಟಕದವರೇ ಆದ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಮಾನ್ಯ ಶ್ರೀ ಕೆ.ಹೆಚ್. ಮುನಿಯಪ್ಪನವರ ಸಹಕಾರದಿಂದ ಇಂಟರ್ ಸಿಟಿ ರೈಲು ದಿನಾಂಕ:೦೯.೧೨.೨೦೦೯ ರಿಂದ ಪ್ರಾರಂಭವಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರತಿನಿತ್ಯ ಸಂಚರಿಸುತ್ತಿದೆ. ಇದರ ಜೊತೆಗೆ ಶಿವಮೊಗ್ಗ – ಹರಿಹರ ರೈಲು ಮಾರ್ಗ ನಿರ್ಮಾಣ ಹಾಗೂ ಕೊಂಕಣ ರೈಲ್ವೆಗೆ ಸೇರಿಸುವ ರೈಲು ಮಾರ್ಗಗಳಿಗೆ ಪ್ರಯತ್ನ ನಡೆಸಲಾಗಿದ್ದು, ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗ ಬ್ರಾಡ್ಗೇಜ್ ಪರಿವರ್ತನೆ ಕಾಮಗಾರಿ ಈಗಾಗಲೇ ಆನಂದಪುರಂವರೆಗೆ ಮುಕ್ತಾಯವಾಗಿದೆ. | |||||
ಜೊತೆಗೆ… | |||||
ಶಿವಮೊಗ್ಗ-ಮೈಸೂರು ಇಂಟರ್ಸಿಟಿ ಮಂಜೂರಾತಿ.ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣ ಕಟ್ಟಡ ಮಂಜೂರಾತಿ.
ಬೈಂದೂರುಕೊಲ್ಲೂರು-ಹಾಲಾಡಿ-ಹೆಬ್ರಿ ಕಾರ್ಕಳ ರೈಲ್ವೆ ಸಮೀಕ್ಷೆಗೆ ಮಂಜೂರಾತಿ.ಬೀರೂರು-ಆರಸೀಕೆರೆ ಜೋಡಿ ರೈಲುಮಾರ್ಗ ಕಾಮಗಾರಿ ಮಂಜೂರಾತಿ.ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿನ ಫ್ಲಾಟ್ ಫಾರಂನ್ನು ದಕ್ಷಿಣಕ್ಕೆ ೧೦೦ ಮೀ. ಮತ್ತು ಉತ್ತರಕ್ಕೆ ೫೦ ಮೀ. ವಿಸ್ತರಣೆಗೆ ಮಂಜೂರಾತಿ. ಶಿವಮೊಗ್ಗ-ಹೊನ್ನಾಳಿ ರಸ್ತೆಯ ರೈಲ್ವೆ ಮೇಲು ಸೇತುವೆ ಕಾಮಗಾರಿಯನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಶೀಘ್ರ ಪೂರ್ಣಗೊಳಿಸಲು ಕ್ರಮ.ಭದ್ರಾವತಿ-ತರೀಕೆರೆ ರಸ್ತೆಯ ರೈಲ್ವೆ ಮೇಲು ಸೇತುವೆ ಕಾಮಗಾರಿಯನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಶೀಘ್ರ ಪೂರ್ಣಗೊಳಿಸಲು ಕ್ರಮ. ಶಿವಮೊಗ್ಗ-ತಾಳಗುಪ್ಪ ಬ್ರಾಡ್ಗೇಜ್ ಪರಿವರ್ತನೆ ಕಾಮಗಾರಿ ಯನ್ನು ಜುಲೈ-೨೦೧೦ರೊಳಗೆ ಶೀಘ್ರ ಪೂರ್ಣಗೊಳಿಸಲು ಕ್ರಮ.ಶಿವಮೊಗ್ಗ ರೈಲ್ವೆ ನಿಲ್ದಾಣ ನವೀಕರಣ ಹಾಗೂ ಕಟ್ಟಡದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ. ಶಿವಮೊಗ್ಗ ರೈಲು ನಿಲ್ದಾಣಕ್ಕೆ ೧೦೦ ಅಡಿ ವರ್ತುಲ ರಸ್ತೆಯನ್ನು ನಿಲ್ದಾಣಕ್ಕೆ ಹೊಂದಿಕೊಂಡಂತೆ ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡಲು ಮಂಜೂರಾತಿಗೆ ಕ್ರಮ.ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದ ಇತರ ಕಾಮಗಾರಿಗೆ ಸುಮಾರು ರೂ. ೨೦೦ಕೋಟಿ ಮಂಜೂರಾತಿ ಪಡೆದ ಬಗ್ಗೆ ಹೆಮ್ಮೆ ಇದೆ. |