ಭರವಸೆಯ ಬೆಳ್ಳಿ ಬೆಳಕು
 
ಕ್ರಿಯಾಶೀಲ ಸಂಸದ-ಶಾಸಕ, ಅಭಿವೃದ್ಧಿಯ ಹರಿಕಾರ, ದೇಶದ ಭವಿಷ್ಯದ ಬೆಳ್ಳಿ ಬೆಳಕು… ಈ ಎಲ್ಲಾ ಮಾತುಗಳಿಗೆ ಅನ್ವರ್ಥಕ ಎನ್ನುವಂತೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುವ ಚೇತನ ಶ್ರೀ ಬೂಕನಕೆರೆ ಯಡಿಯೂರಪ್ಪ ರಾಘವೇಂದ್ರ. ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರ ಸುಪುತ್ರರಾಗಿರುವ ಇವರು ಜನರ ಮಧ್ಯೆ ಬೆಳೆದು-ಅರಳಿ ನಿಂತ ಯುವ ನಾಯಕ. ಬೇರು ಮಟ್ಟದಲ್ಲಿ ಪಕ್ಷದ ಸಂಘಟನೆ ಜತೆಗೆ ಬೆಳಗಿದ ಯುವ ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಎ.ಬಿ.ವಿ.ಪಿಯ ಶಿಸ್ತಿನ ಸಿಪಾಯಿ, ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಶಿಕಾರಿಪುರ ಪುರಸಭೆಯ ಸದಸ್ಯರಾಗಿ, ಹೀಗೆ ಹಂತ ಹಂತವಾಗಿ ಜನಸೇವೆಯ ಮೆಟ್ಟಿಲುಗಳೆರುತ್ತಾ ಮೂರು ಬಾರಿ ಸಂಸದರಾಗಿ, ಒಂದು ಬಾರಿ ಶಾಸಕರಾಗಿ ಸಮಾಜ ಸೇವೆಯಲ್ಲಿ ಇವರು ತೊಡಗಿದ್ದಾರೆ. 
 
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಮಣ್ಣಿನಲ್ಲಿ ಹತ್ತಾರು ರಾಷ್ಟçನಾಯಕರು ಅರಳಿದ್ದಾರೆ. ಈ ಪೈಕಿ ಶ್ರೇಷ್ಠ ಸಾಧನೆಗೈದವರು ನಮ್ಮ ಹೆಮ್ಮೆಯ  ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು. ಅವರು ತೋರುತ್ತಿರುವ ಜನ ಸೇವೆಯ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಾ, ದೇಶದ ಶ್ರೇಷ್ಠ ಸಂಸದೀಯಪಟುವಾಗಿ ಮೂಡುತ್ತಿದ್ದಾರೆ ಶ್ರೀ ಬಿ ವೈ ರಾಘವೇಂದ್ರ. ತಮ್ಮ ಕ್ರಿಯಾಶೀಲತೆ, ಕಾರ್ಯತತ್ಪರತೆ ಹಾಗೂ ನಾಯಕತ್ವ ಗುಣದಿಂದ ಈಗಾಗಲೆ ಪಕ್ಷದ ರಾಷ್ಟ್ರೀಯ ನಾಯಕರ ಗಮನ ಸೆಳೆದಿರುವ ಶ್ರೀ ಬಿ ವೈ ರಾಘವೇಂದ್ರ ನಮ್ಮ ನಾಡಿನ ಹೆಮ್ಮೆಯ ಯುವ ನಾಯಕ.
 
ಚಲನಶೀಲ, ಯುವ ಶಕ್ತಿ, ಚಿಂತನ ಶೀಲ ನಾಯಕ, ಹಾಗೂ ಚೈತನ್ಯ ಶಕ್ತಿಯ ಜನಸೇವಕ ಹೀಗೆ ತ್ರಿವೇಣಿ ಸಂಗಮಗಳ ಸಂಕೇತದಂತಿರುವ ಶ್ರೀ ರಾಘವೇಂದ್ರ, ರಾಜಕೀಯ, ಸಮಾಜ ಸೇವೆ, ಶಿಕ್ಷಣ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಇವರು ಸಕ್ರಿಯರಾಗಿದ್ದಾರೆ. ಹಂತ ಹಂತವಾಗಿ ಜನಸೇವೆಯೊಂದಿಗೆ ಲಕ್ಷಾಂತರ ಜನರ ಮನ ಗೆದ್ದಿರುವ ಶ್ರೀ ರಾಘವೇಂದ್ರ ಅವರ ಸಾಧನೆಯ ಸಿಂಹಾವಲೋಕನದ ಝಲಕ್ ಇಲ್ಲಿದೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ನೀರಾವರಿ, ಪ್ರವಾಸೋದ್ಯಮ, ರೈಲ್ವೆ, ವಿಮಾನಯಾನ ಹೀಗೆ ಏನುಂಟು ಏನಿಲ್ಲ? ಕಳೆದ ಒಂದು ದಶಕದ ಅವಧಿಯಲ್ಲಿ, ಜನ ಪ್ರತಿನಿಧಿಯಾಗಿ, ಇವರು ಶಿವಮೊಗ್ಗವನ್ನು ಒಂದು ಮಾದರಿ ಕ್ಷೇತ್ರವಾಗಿ ರೂಪುಗೊಳಿಸಿದ್ದಾರೆ.
 
ನಮ್ಮ ಕನ್ನಡ ಮಣ್ಣಿನಲ್ಲಿ ಅರಳಿ ಈಗ ದೇಶಾದ್ಯಂತ ತಮ್ಮ ಅಭಿವೃದ್ಧಿ ಸುದ್ದಿಗಳ ಮೂಲಕ ಸುದ್ದಿ ಮಾಡುತ್ತಿರುವ ಶ್ರೀ ರಾಘವೇಂದ್ರ ಅವರ ಸಾಧನೆಯ ಸುಂದರ ಪುಟಗಳು ನಿಮಗಾಗಿ ಇಲ್ಲಿವೆ

A visionary statesman

Our proud Member of Parliament B Y Raghavendra stands true testimony to a pro-active statesman. He has spearheaded many developmental projects and proved himself as a youth icon of the country. He is grown as prominent statesman and gained confidence of people cutting across the party line by following footstep of his father and popular, Ex Chief Minister Sri B S Yediyurappa, the son of the soil.

Mr. Raghavendra has also made tremendous effort to organise the BJP from grass-root level. He has emerged as an able mass leader by climbing career ladder through serving in various positions like senate member of Kuvempu University, Shikaripur Town Municipal member, three-time member of Parliament and the member of Legislative Assembly.

Several national leaders have emerged in the soil of Shivamogga, the gateway of Malnad region. Our proud Ex Chief Minister B S Yediyurappa is one among them. Raghavendra is also emerging as a top Parliamentarian and engaged in the path of development like his father. He has already attracted attention of BJP national leaders through his activities and leadership skills. He is the future star in making in the arena of national politics.

BYR is the symbol of good governance, all round development and a trouble shooter for the people of malnad region. He is seen as a power of youth and source of inspiration. He has become active in all social sectors including education, health. Raghavendra has won the hearts of people through his social activities and unfolding here the story of his achievements in all the sectors including education, health, basic infrastructure, irrigation, tourism, railways, civil aviation………. Thus, he has turned Shivamogga into a model Lok Sabha constituency as people’s representative during the last one decade.

Raghavendra has shown that he is a leader ready to carve a niche for himself in politics through blossoming in the soil of Karnataka.

ಪತ್ರಿಕಾ ದಿನಚಾರಣೆ ಕಾರ್ಯಕ್ರಮ

ಪತ್ರಿಕಾ ದಿನಚಾರಣೆ ಕಾರ್ಯಕ್ರಮ

“ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ” ಅಭಿಯಾನ ಕಾರ್ಯಕ್ರಮ

“ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ” ಅಭಿಯಾನ ಕಾರ್ಯಕ್ರಮ

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಶ್ರೀ ನವನೀತ್ ಕೊಠಾರಿ, ಜಂಟಿ ಕಾರ್ಯದರ್ಶಿಗಳು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇವರ ಭೇಟಿ

ಶ್ರೀ ನವನೀತ್ ಕೊಠಾರಿ, ಜಂಟಿ ಕಾರ್ಯದರ್ಶಿಗಳು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇವರ ಭೇಟಿ

ಅಡಿಕೆ ಬೆಳೆಯ ಎಲೆಚುಕ್ಕೆ ರೋಗ ಮತ್ತು ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪನೆ ಕುರಿತು

ಅಡಿಕೆ ಬೆಳೆಯ ಎಲೆಚುಕ್ಕೆ ರೋಗ ಮತ್ತು ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪನೆ ಕುರಿತು

ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಉದ್ದೇಶಕ್ಕಾಗಿ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಸಂಬಂಧ

ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಉದ್ದೇಶಕ್ಕಾಗಿ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಸಂಬಂಧ

ಶ್ರೀ ಬಸವೇಶ್ವರಸ್ವಾಮಿ ಸಮುದಾಯ ಭವನದ ಗುದ್ದಲಿ ಪೂಜೆ

ಶ್ರೀ ಬಸವೇಶ್ವರಸ್ವಾಮಿ ಸಮುದಾಯ ಭವನದ ಗುದ್ದಲಿ ಪೂಜೆ

ಶ್ರೀ ಶನೈಶ್ವರ ದೇವಾಲಯದ ಗರ್ಭಗುಡಿಗೆ ಕವಚ ಸಮರ್ಪಣೆ

ಶ್ರೀ ಶನೈಶ್ವರ ದೇವಾಲಯದ ಗರ್ಭಗುಡಿಗೆ ಕವಚ ಸಮರ್ಪಣೆ

ಬೈಂದೂರು ವಿಧಾನಸಭಾ ಕ್ಷೇತ್ರ- ಕಡಲ ಕೊರೆತದಿಂದ ಹಾನಿ

ಬೈಂದೂರು ವಿಧಾನಸಭಾ ಕ್ಷೇತ್ರ- ಕಡಲ ಕೊರೆತದಿಂದ ಹಾನಿ

ಬೈಂದೂರು ವಿಧಾನಸಭಾ ಕ್ಷೇತ್ರದ- ಮೆಸ್ಕಾಂ ಸಬ್ ಸ್ಟೇಷನ್ ಕಾಮಗಾರಿ

ಬೈಂದೂರು ವಿಧಾನಸಭಾ ಕ್ಷೇತ್ರದ- ಮೆಸ್ಕಾಂ ಸಬ್ ಸ್ಟೇಷನ್ ಕಾಮಗಾರಿ

ಶಿವಮೊಗ್ಗ ಭೋವಿ-ವಡ್ಡರ ಬೃಹತ್ ಸಮಾವೇಶ ಹಾಗೂ ಭೋವಿ ಭವನವನ್ನು ಶ್ರೀಗಳೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಶಿವಮೊಗ್ಗ ಭೋವಿ-ವಡ್ಡರ ಬೃಹತ್ ಸಮಾವೇಶ ಹಾಗೂ ಭೋವಿ ಭವನವನ್ನು ಶ್ರೀಗಳೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹೊಳಲೂರಿನಲ್ಲಿ ಪಂಚಾಯತ್ ರಾಜ್ ದಿವಸ್ 2022 ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹೊಳಲೂರಿನಲ್ಲಿ ಪಂಚಾಯತ್ ರಾಜ್ ದಿವಸ್ 2022 ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಭಾರತೀಯ ಜನತಾ ಪಕ್ಷ ತೀರ್ಥಹಳ್ಳಿ ಮಂಡಲ ಹಾಗೂ ಎಸ್ ಸಿ ಮೋರ್ಚಾ ವತಿಯಿಂದ ಸುವರ್ಣ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ. ಆರ್. ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ|| ಬಿ. ಆರ್. ಅಂಬೇಡ್ಕರ್ ಅವರ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಶಿವಮೊಗ್ಗ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಲಾಯಿತು.

ಶಿವಮೊಗ್ಗ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಲಾಯಿತು.

ಶಿವಶರಣೆ ಅಕ್ಕ ಮಹಾದೇವಿ ಅವರ ಜನ್ಮ ಸ್ಥಳಉಡುತಡಿಯಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕ ಕೇಂದ್ರಕ್ಕೆದ ಭೇಟಿ ನೀಡಿ ಬೊಟ್ ನಲ್ಲಿ ವಿಹರಿಸುವ ಸ್ಥಳ, ಜೀವನ ಕಥೆಯ ಗುಹೆ, ಪ್ರತಿಮಾ ಸ್ಥಳ ಹಾಗೂ ಇನ್ನಿತರ ಕಾಮಗಾರಿಯನ್ನು ವೀಕ್ಷಿಸಲಾಯಿತು.

ಶಿವಶರಣೆ ಅಕ್ಕ ಮಹಾದೇವಿ ಅವರ ಜನ್ಮ ಸ್ಥಳಉಡುತಡಿಯಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕ ಕೇಂದ್ರಕ್ಕೆದ ಭೇಟಿ ನೀಡಿ ಬೊಟ್ ನಲ್ಲಿ ವಿಹರಿಸುವ ಸ್ಥಳ, ಜೀವನ ಕಥೆಯ ಗುಹೆ, ಪ್ರತಿಮಾ ಸ್ಥಳ ಹಾಗೂ ಇನ್ನಿತರ ಕಾಮಗಾರಿಯನ್ನು ವೀಕ್ಷಿಸಲಾಯಿತು.

ಸದ್ಗುರು ಶ್ರೀ ಜಗ್ಗಿ ವಾಸುದೇವ ಅವರು ಪ್ರಾರಂಭ ಮಾಡಿರುವ #SaveSoil ಅಭಿಯಾನದಲ್ಲಿ ಭಾಗವಹಿಸಿ, ಇಂದು ಉಡುತಡಿಯಿಂದ ಇಶಾ ಸಂಸ್ಥೆ ಕೊಯಿಮತ್ತೂರಿಗೆ ಕಾಲ್ನಡಿಗೆ ಮೂಲಕ ಹೋಗುತ್ತಿರುವ ಶ್ರೀ ಯಶಸ್ ಅವರಿಗೆ ಶುಭಾಶಯವನ್ನು ತಿಳಿಸಲಾಯಿತು.

ಸದ್ಗುರು ಶ್ರೀ ಜಗ್ಗಿ ವಾಸುದೇವ ಅವರು ಪ್ರಾರಂಭ ಮಾಡಿರುವ #SaveSoil ಅಭಿಯಾನದಲ್ಲಿ ಭಾಗವಹಿಸಿ, ಇಂದು ಉಡುತಡಿಯಿಂದ ಇಶಾ ಸಂಸ್ಥೆ ಕೊಯಿಮತ್ತೂರಿಗೆ ಕಾಲ್ನಡಿಗೆ ಮೂಲಕ ಹೋಗುತ್ತಿರುವ ಶ್ರೀ ಯಶಸ್ ಅವರಿಗೆ ಶುಭಾಶಯವನ್ನು ತಿಳಿಸಲಾಯಿತು.

ಹರಿಹರಪುರ ಶ್ರೀ ಮಠದ ಮಹಾಕುಂಭಾಭಿಷೇಕದ ಅಂಗವಾಗಿ ಶ್ರೀ ನೂತನ ಲಕ್ಷ್ಮಿ ನರಸಿಂಹ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಶ್ರೀ ಶಾರದಾ ಲಕ್ಷ್ಮೀನರಸಿಂಹ ಪೀಠದ ಪರಮ ಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ಆಶೀರ್ವಾದವನ್ನು ಪಡೆಯಲಾಯಿತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಉದ್ಘಾಟಿಸಲಾಯಿತು.

ಶಿವಮೊಗ್ಗದ ಸೊಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಲಾಯಿತು‌.

ಶಿವಮೊಗ್ಗದ ಸೊಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಲಾಯಿತು‌.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಉದ್ಘಾಟಿಸಲಾಯಿತು.ಈ ಸಭೆಯಲ್ಲಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಬಿಜೆಪಿ ತಾಲ್ಲೂಕು ಅಧ್ಯಕ್ಷರು ಹಾಗೂ ಜಿಲ್ಲೆಯ ಕಾರ್ಯಕರ್ತರು ಉಪಸ್ಥಿತರಿದ್ದರು