- April 12, 2022
- Posted by: BYadmin
- Category: Latest Events, News & Events
No Comments
ಈ ಸಂದರ್ಭದಲ್ಲಿ ಕೋವಿಡ್ -19 ವಿರುದ್ಧ ಪ್ರಮುಖ ಅಸ್ತ್ರವಾಗಿರುವ ಲಸಿಕೆಯನ್ನು ಉಚಿತವಾಗಿ ನೀಡುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಹತ್ವದ ನಿರ್ಧಾರಕ್ಕೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. 130 ಕೋಟಿಗೂ ಅಧಿಕ ಜನಸಂಖ್ಯೆಯ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಉಚಿತ ಲಸಿಕೆ ಅಭಿಯಾನ ಯಶಸ್ಸು ಸಾಧಿಸಿದೆ. ಮಕ್ಕಳ ಲಸಿಕಾಕರಣ ಕೂಡ ಅದೇ ರೀತಿ ಯಶಸ್ಸು ಸಾಧಿಸುತ್ತದೆ. ಕೋವಿಡ್-19 ವಿರುದ್ಧ ಹೋರಾಟ ಮುಂದುವರೆದಿದ್ದು, ಪ್ರತಿಯೊಬ್ಬರು ಕೈ ಜೋಡಿಸಬೇಕು.ಈ ಸಂಧರ್ಭದಲ್ಲಿ KSSIDC ಉಪಾಧ್ಯಕ್ಷರಾದ ಎಸ್. ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್ ಪಾಲಿಕೆಯ ಮಹಾಪೌರರಾದ ಸುನಿತಾ ಅಣ್ಣಪ್ಪ, ಸಂಸ್ಥೆಯ ಕಾರ್ಯದರ್ಶಿಗಳಾದ ಲಕ್ಷ್ಮಿ ನಾರಾಯಣ್, ಶಿವಮೊಗ್ಗ ಬಿಜೆಪಿಯ ನಗರದ ಅಧ್ಯಕ್ಷರಾದ ಜಗದೀಶ್, ಸೂಡಾ ಅಧ್ಯಕ್ಷರಾದ ನಾಗರಾಜ್, ವಿದ್ಯಾನಗರ ಆರೋಗ್ಯ ಕೇಂದ್ರದ ಡಾ ಉಮಾದೇವಿ, ಪ್ರಾಥಮಿಕ ಆರೋಗ್ಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.