ಶಿಕಾರಿಪುರದ ಮಂಗಳ ಭವನದಲ್ಲಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಇವರ ವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ರೈತ ಸಮಾವೇಶವನ್ನು ಉದ್ಘಾಟಿಸಲಾಯಿತು.

ಭಾರತ ದೇಶದಲ್ಲಿ ಭೂಮಿಯನ್ನು, ನದಿಯನ್ನು ಹಾಗೂ ಗೋವನ್ನು ತಾಯಿಯಂತೆ ಗೌರವಿಸುವ ಪರಂಪರೆ ನಮ್ಮದು, ಕರ್ನಾಟಕ ಸರ್ಕಾರವು ಬಾಲ್ಯ ವಿವಾಹವನ್ನು ತಡೆಯುವ ಉದ್ದೇಶದಿಂದ ಮದುವೆಯ ವಯಸ್ಸನ್ನು 18 ರಿಂದ 21 ಕ್ಕೆ ಏರಿಸಿದ್ದಾರೆ, ಕೇಂದ್ರ ಸರ್ಕಾರವು ಬೇಟಿ ಬಚಾವ್, ಬೇಟಿ ಪಡಾವ್ ಯೋಜನೆಯನ್ನು ಜಾರಿಗೆ ತಂದಿದೆ, ಮಹಿಳಾ ಸುರಕ್ಷತೆಗೆ ಆದ್ಯತೆಯನ್ನು ನೀಡಿ ವಿವಿಧ ಯೋಜನೆಯನ್ನು ಚಾಲ್ತಿಗೆ ತಂದಿದೆ, ಸ್ಥಳೀಯ ಮಟ್ಟದಲ್ಲಿ ಇರುವ ಮಹಿಳಾ ಶಕ್ತಿಯು ಸಂಘಟನೆಯಾಗಿ ಬೆಳೆಯಬೇಕು ಎಂದು ತಿಳಿಸಲಾಯಿತು.ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ.ರಾಜಯೋಗಿನಿ ಬ್ರಹ್ಮಾಕುಮಾರಿ ಅನುಸೂಯಾಜಿ, ಬ್ರಹ್ಮಕುಮಾರಿ ಸ್ನೇಹಾಜಿ,ಕರ್ನಾಟಕ ಸಾಬೂನು ಕಂಪನಿಯ ನಿರ್ದೇಶಕರಾದ ನಿವೇದಿತಾರಾಜು, ವೀರಶೈವ ಲಿಂಗಾಯತ ಶಿಕಾರಿಪುರ ಘಟಕದ ಅಧ್ಯಕ್ಷರಾದ ಇರೇಶ್ ಮತ್ತಿತರರು ಉಪಸ್ಥಿತರಿದ್ದರು.Leave a Reply