ಶಿವಮೊಗ್ಗ ಜಿಲ್ಲೆಯಲ್ಲಿ ತಲೆದೋರಿರುವ ಮಂಗನಕಾಯಿಲೆ ಬಗ್ಗೆ ತಜ್ಞರ ತಂಡದಿಂದ ಅಧ್ಯಯನಕ್ಕೆ ಕ್ರಮ.

Date :07.04.2020

ಶಿವಮೊಗ್ಗ ಜಿಲ್ಲೆಯಲ್ಲಿ ತಲೆದೋರಿರುವ ಮಂಗನಕಾಯಿಲೆ ಬಗ್ಗೆ ತಜ್ಞರ ತಂಡದಿಂದ ಅಧ್ಯಯನಕ್ಕೆ ಕ್ರಮ.

🔷 ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇತ್ತೀಚೆಗೆ ಮಂಗನಕಾಯಿಲೆಯಿಂದ ಮೃತರಾದವರ ಬಗ್ಗೆ ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ತೀರ್ಥಹಳ್ಳಿ ತಾಲ್ಲೂಕು ವೈದ್ಯರುಗಳೊಂದಿಗೆ ಸಭೆ ನಡೆಸಿದರು.

🔷 ಜಿಲ್ಲೆಯಲ್ಲಿ ಮಂಗನಕಾಯಿಲೆಯಿಂದ 130 ಜನ ಬಳಲುತ್ತಿದ್ದು, ಈವರೆಗೆ 5 ಜನರು ಮೃತರಾಗಿದ್ದಾರೆ.

🔷 ಮಂಗನ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ 3 ಹಂತದಲ್ಲಿ ಲಸಿಕೆಯನ್ನು ಹಾಕಲಾಗುತ್ತಿದ್ದು, ಮೊದಲ ಲಸಿಕೆಯ ನಂತರ ಒಂದು ತಿಂಗಳಿಗೆ ಮತ್ತೊಂದು ಲಸಿಕೆಯನ್ನು ಹಾಗೂ ನಂತರ ಆರು ತಿಂಗಳಿನಲ್ಲಿ ಮೂರನೇ ಲಸಿಕೆಯನ್ನು ಹಾಕಲಾಗುತ್ತಿದೆ. ಆದರೆ ಬಹಳಷ್ಟು ಜನರು ಈ ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದೇ ತಾಲ್ಲೂಕಿನಲ್ಲಿ ಈ ಕಾಯಿಲೆ ಉಲ್ಬಣಗೊಳ್ಳಲು ಕಾರಣವಾಗಿರುವುದಾಗಿ ವೈದ್ಯರು ತಿಳಿಸಿದರು.

🔷ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವುದರ ಅವಶ್ಯಕತೆಯನ್ನು ಮನಗಂಡು ಅರಣ್ಯ ಇಲಾಖೆ, ಆರೋಗ್ಯ ಇಲಾಖೆಗಳ ಜಂಟಿ ಸಹಯೋಗದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೂಡಲೇ ಈ ಕಾಯಿಲೆಯ ಬಗ್ಗೆ ಹಾಗೂ ಲಸಿಕೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ಸಲುವಾಗಿ ಕರಪತ್ರಗಳನ್ನು ಮುದ್ರಿಸಿ ಹಂಚುವಂತೆ ತಿಳಿಸಲಾಯಿತು.

🔷 ಅಲ್ಲದೇ ಇದೇ ಸಂದರ್ಭದಲ್ಲಿ ಆರೋಗ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಜಾವೆದ್ ಆಖ್ತರ್ ರೊಂದಿಗೆ ಮಾತನಾಡಿ ಮಂಗನ ಕಾಯಿಲೆಯ ಬಗ್ಗೆ ಅಧ್ಯಯನ ನಡೆಸುವ ಕುರಿತಂತೆ ಸಮಲೋಚಿಸಿ, ಆದಷ್ಟು ಬೇಗನೆ ತಜ್ಞರ ತಂಡವನ್ನು ಕಳುಹಿಸಿಕೊಡುವಂತೆ ಮನವಿ ಮಾಡಲಾಯಿತು.Leave a Reply