- July 11, 2020
- Posted by: BYadmin
- Category: Video
No Comments

ಶಿವಮೊಗ್ಗದ ತುಂಗಾ ನಗರದ ಆಶಾಕಾರ್ಯಕರ್ತೆ ಅನ್ನಪೂರ್ಣ ಅವರ ಪರಿಶ್ರಮ ಮತ್ತು ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಇವರಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಅತ್ಯುತ್ತಮ ಆಶಾ ಕಾರ್ಯಕರ್ತೆ ಎಂದು ಬಿರುದು ನೀಡಿ ಅವರ ಕಾರ್ಯ ಇತರರಿಗೂ ಸ್ಫೂರ್ತಿ ಎಂದು ಕೊಂಡಾಡಿದೆ.
ಕಳೆದ ಮೂರು ವರ್ಷಗಳಿಂದ ತುಂಗಾ ನಗರದಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೋವಿಡ್-19 ರ ಈ ಸಂಕಷ್ಟದ ಕಾಲದಲ್ಲಿ ಅತ್ಯುತ್ತಮವಾಗಿ ಸಲ್ಲಿಸಿರುವ ಸಮರ್ಪಣಾ ಭಾವದ ಈ ಸೇವೆಗೆ ಇವರಿಗೆ ಈ ಮನ್ನಣೆ ದೊರೆತಿದೆ.
ಇವರಿಗೆ ಹಾರ್ದಿಕ ಅಭಿನಂದನೆಗಳು.