ಮದುವಣಗಿತ್ತಿಯಂತೆ ಅಲಂಕಾರಗೊಳ್ಳುತ್ತಿರುವ ಈಜುಕೊಳ ಮತ್ತು ಕುಮದ್ವತಿ ಕೇಂದ್ರಿಯ ವಸತಿ ಶಾಲೆ

ಶಿಕಾರಿಪುರ : ಅ.10

ದಕ್ಷಿಣ ಭಾರತ ವಲಯ ಮಟ್ಟದ ಸಿ.ಬಿ.ಎಸ್.ಇ ಶಾಲೆಗಳ ಈಜು ಸ್ಪರ್ಧೆಯು ಕುಮದ್ವತಿ ಕೇಂದ್ರಿಯ ವಸತಿ ಶಾಲೆಯಲ್ಲಿ ಆಯೋಜನೆಗೊಂಡಿರುತ್ತದೆ. ಈ ಸ್ಪರ್ಧೆಗೆ ಶಾಲೆ ಮತ್ತು ಈಜು ಕೊಳವು ಮದುವಣಗಿತ್ತಿಯಂತೆ ಅಲಂಕಾರಗೊಳ್ಳುತ್ತಿದೆ.

ಈ ಕ್ರೀಡಾಕೂಟದಲ್ಲಿ 12ವರ್ಷದಿಂದ 18ವರ್ಷದೊಳಗಿನ ಸುಮಾರು 1200 ಕ್ರೀಡಾಪಟುಗಳು, ಫ್ರೀ-ಸ್ಟೈಲ್, ಬಟರ್ ಫ್ಲೈ, ಬ್ರೆಸ್ಟ್‍ಸ್ಟ್ರೋಕ್, ಬ್ಯಾಕ್‍ಸ್ಟ್ರೋಕ್ ಈ ನಾಲ್ಕು ವಿಭಾಗಳಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಆಂಧ್ರಪ್ರದೇಶ ಪಾಂಡಿಚೇರಿ, ಅಂಡಮಾನ್ ಮತ್ತು ನಿಕೋಬಾರ್ ರಾಜ್ಯಗಳ ಈಜು ಸ್ಪಧಿಗಳು ಭಾಗವಹಿಸುವುದರಿಂದ ಅವರಿಗೆ ಬೇಕಾದ ವಸತಿ ವ್ಯವಸ್ಥೆ, ಊಟ ಮತ್ತು ಮೂಲಭೂತ ಸೌಕರ್ಯಗಳ ಪೂರೈಕೆಗೆ ಬೇಕಾದ ಸಿದ್ಧತೆಗಳು ಭರದಿಂದ ಸಾಗುತ್ತಿವೆÉ.

ನಾಲ್ಕು ದಿನಗಳ ಕಾಲ ನಡೆಯುವ ಈ ಸ್ಪರ್ಧೆಗೆ ಆಡಳಿತ ಮಂಡಳಿ ಮತ್ತು ಸಿಬ್ಬಂಧಿ ವರ್ಗವು ಬೇಕಾದ ಎಲ್ಲಾ ಸಿದ್ದತೆಯನ್ನು ಹಾಗೂ ಯಾವುದೇ ತೊಂದರೆಗಯಾಗದಂತೆ ಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಶ್ರೀ ಬಿ,ವೈ.ರಾಘವೇಂದ್ರರವರ ನೇತೃತ್ವದಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿದೆ.

ಈ ಸ್ಪರ್ಧೆಯ ಉದ್ಘಾಟನೆಯನ್ನು ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯಶ್ರೀ ಬಿ.ಎಸ್. ಯಡಿಯೂರಪ್ಪನವರು ನೆರವೇರಿಸಲಿದ್ದಾರೆ, ಮುಖ್ಯಅತಿಥಿಗಳಾಗಿ ಮಾನ್ಯಶ್ರೀ ಅಭಯಚಂದ್ರಜೈನ್‍ರವರು ಯುವಜನ ಸೇವೆ ಮತ್ತು ಕ್ರೀಡಾ ಸಚಿವರು ಕರ್ನಾಟಕ ಸರ್ಕಾರ, ಮಾನ್ಯಶ್ರೀ ಕೆ. ಶ್ರೀನಿವಾಸನ್ ಪ್ರಾದೇಶಿಕ ಅಧಿಕಾರಿಕಾರಿಗಳು ಸಿ.ಬಿ.ಎಸ್.ಇ. ಚನೈ ಹಾಗೂ ಶ್ರೀ ಪ್ರಕಾಶ್ ಶೆಟ್ಟಿ ಸಂಸ್ಥಾಪಕ ಅಧ್ಯಕ್ಷರು ಎಂ.ಆರ್.ಜಿ ಗ್ರೂಪ್ ಬೆಂಗಳೂರು. ಶ್ರೀ ಎಂ. ಸತೀಶ್ ಕುಮಾರ್ ಏಕಲವ್ಯ ಪ್ರಶಸ್ತಿ ವಿಜೇತ ಈಜುಗಾರರು, ಜಂಟಿ ಕಾರ್ಯದರ್ಶಿಗಳು, ರಾಷ್ಟ್ರೀಯ ಈಜು ಸಂಸ್ಥೆ, ಕು. ಕೆ.ಚಿತ್ರಾ ಈಜುಗಾರರು, ಏಕಲವ್ಯ ಪ್ರಶಸ್ತಿ ವಿಜೇತರು ಆಗಮಿಸಲಿದ್ದಾರೆ.

ಮೂರು ದಿನಗಳಕಾಲ ನಡೆಯುವ ಸ್ಪರ್ಧೆಗಳ ಬಗ್ಗೆ ಮುಂಚಿತವಾಗಿ ತಮ್ಮ ಪತ್ರಿಕೆಯಲ್ಲಿ ವರದಿ ಮಾಡಬೇಕೆಂದು ಹಾಗೂ ದಿನಾಂಕ 13-10-2015ನೇ ಮಂಗಳವಾರ, ಮದ್ಯಾಹ್ನ 02.30 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ತಾವುಗಳು ಆಗಮಿಸಿ ಉದ್ಘಾಟನಾ ಕಾರ್ಯಕ್ರಮದ ವರದಿ ಹಾಗೂ ಪ್ರತಿದಿನ ನಡೆಯುವ ಸ್ಪರ್ಧೆಗಳ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ಕೋರಿದೆ.

BYR 01

BYR 02

BYR 03

BYR 04

BYR 05



Leave a Reply