Baindoor Visit on 25th & 26th of October 2013

ಸಂಸದ ಶ್ರೀ ಬಿ.ವೈ. ರಾಘವೇಂದ್ರರವರ ಬೈಂದೂರು ಪ್ರವಾಸದ ವಿವರಗಳು:

ಶಿವಮೊಗ್ಗ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಬಿ.ವೈ. ರಾಘವೇಂದ್ರರವರು ದಿನಾಂಕ: 26 ಅಕ್ಟೋಬರ್ 2013 ರಂದು ಬೈಂದೂರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದರ ವಿವರಗಳನ್ನು ದಯಮಾಡಿ ಸಾರ್ವಜನಿಕ ಮಾಹಿತಿಗಾಗಿ ತಮ್ಮ ಸುದ್ದಿ ಮಾಧ್ಯಮದಲ್ಲಿ ಪ್ರಚುರ ಪಡಿಸುವಂತೆ ಕೋರಿದೆ:

1. ಬೈಂದೂರು ರೈಲು ನಿಲ್ದಾಣಕ್ಕೆ ಭೇಟಿ:
ಬೈಂದೂರು ಮುಕಾಂಬಿಕಾ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸುಮಾರು ೧೬ ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ತುಂಬಾ ಅಚ್ಚುಕಟ್ಟಾಗಿ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೊಂದು ಅತಿ ದೊಡ್ಡ ರೈಲು ನಿಲ್ದಾಣವಾಗಿ ಹೊರಹೊಮ್ಮಲಿರುವುದಾಗಿ ತಿಳಿಸಿದರು. ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಭಕ್ತರ ಹಿತ ದೃಷ್ಠಿಯಿಂದ ಮಂಗಳೂರು-ಮಡಗಾಂವ್ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲನ್ನು ನಿಲುಗಡೆ ಮಾಡುವ ಬಗ್ಗೆ ಈಗಾಗಲೇ ರೈಲ್ವೆ ಸಚಿವರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಮನವಿ ಮಾಡಿಕೊಳ್ಳಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿರುವ ವಿಷಯವನ್ನು ತಿಳಿಸಿರುತ್ತಾರೆ.

2.ರಾಷ್ಟ್ರೀಯ ಹೆದ್ದಾರಿ:
ಕುಂದಾಪುರದಿಂದ ಶಿರೂರು ತನಕ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಕೆಲವೇ ದಿನಗಳಲ್ಲಿ ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಕಾರ್ಯ ನಡೆಸಲು ಸಂಬಂಧಿಸಿದವರಿಗೆ ಸೂಚಿಸುವುದಾಗಿಯೂ ಮತ್ತು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಪಡಿಸುವಂತೆ ಕೇಂದ್ರ ಭೂ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ಅಸ್ಕರ್ ಫರ್ನಾಂಡಿಸ್‌ರೊಂದಿಗೆ ಚರ್ಚಿಸುವುದಾಗಿ ತಿಳಿಸಿರುತ್ತಾರೆ.

3. ಕುಡಿಯುವ ನೀರು ಯೋಜನೆ ಬಗ್ಗೆ:
ಕಳೆದ ಸರ್ಕಾರದ ಅವಧಿಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಮಂಜೂರು ಮಾಡಿಸಿದ್ದು, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಅದನ್ನು ಶೀಘ್ರ ಪೂರ್ಣಗೊಳಿಸಲು ಈಗಿನ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿರುತ್ತಾರೆ.
4. ಮರವಂತೆಗೆ ಬೇಟಿ :
ಮರವಂತೆಯಲ್ಲಿ ಸುಮಾರು 54 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೇರಳ ಶೈಲಿಯ ಬಂದರಿಗೆ ಭೇಟಿ ನೀಡಿ ಅಲ್ಲಿನ ಮೀನುಗಾರರೊಂದಿಗೆ ಚರ್ಚಿಸಿ, ಅವರ ಕೋರಿಕೆಯಂತೆ ದಕ್ಷಿಣ ತಡೆಗೋಡೆಯನ್ನು ಇನ್ನೂ 100 ಮೀ. ವಿಸ್ತರಿಸುವಂತೆ ಸಂಬಂಧಿಸಿದವರಿಗೆ ಸೂಚಿಸುವುದಾಗಿ ತಿಳಿಸಿರುತ್ತಾರೆ.

5. ಕೀರ್ತಿಶೇಷ ಯಡ್ತರೆ ಮಂಜಯ್ಯ ಶೆಟ್ಟಿ ಜನ್ಮಶತಮಾನೋತ್ಸವ:
ಬೈಂದೂರು ಯಡ್ತರೆಯಲ್ಲಿ ಆಯೋಜಿಸಿದ್ದ ಕೀರ್ತಿಶೇಷ ಯಡ್ತರೆ ಮಂಜಯ್ಯ ಶೆಟ್ಟಿಯವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಸಂಸದರು, ಬೈಂದೂರು ಅಭಿವೃದ್ದಿಗೆ ಮುನ್ನುಡಿ ಬರೆದವರು ಯಡ್ತರೆ ಮಂಜಯ್ಯ ಶೆಟ್ಟಿಯವರು ಎಂದು ಅವರ ಕಾರ್ಯಗಳನ್ನು ಶ್ಲಾಘಿಸಿರುತ್ತಾರೆ.



Leave a Reply