ಶಿವಮೊಗ್ಗ ನಗರವನ್ನು ದೇಶದ ಆಯ್ದ 100 ನಗರಗಳ ಪೈಕಿ ಒಂದಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆ.
1522.86 ಕೋಟಿ ವೆಚ್ಚದಲ್ಲಿ ಒಟ್ಟು 81 ಕಾಮಗಾರಿಗಳಿಗೆ ಮಂಜೂರಾತಿಯಾಗಿದ್ದು, ಇದರಲ್ಲಿ ಸ್ಮಾರ್ಟ್ ಸಿಟಿ ಅಭಿಯಾನದ ಅನುದಾನ ರೂ. 973.55 ಕೋಟಿ ವೆಚ್ಚದಲ್ಲಿ 47 ಕಾಮಗಾರಿಗಳ ಅನುಷ್ಟಾನದ ಪೈಕಿ 9.53 ಕೋಟಿ ವೆಚ್ಚದ 6 ಕಾಮಗಾರಿಗಳು ಪೂರ್ಣಗೊಂಡಿದ್ದು, ರೂ. 902.16 ಕೋಟಿ ಮೌಲ್ಯದ 37 ಕಾಮಗಾರಿಗಳು ಪ್ರಗತಿಯಲ್ಲಿವೆ. ಅದೇ ರೀತಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಅಡಿಯಲ್ಲಿ ರೂ. 220.43 ಕೋಟಿ ಮೌಲ್ಯದ 3 ಯೋಜನೆಗಳು ಹಾಗೂ ಒಗ್ಗೂಡಿಸುವಿಕೆ ಅಡಿಯಲ್ಲಿ ರೂ. 329.09 ಕೋಟಿ ಮೌಲ್ಯದ 31 ಯೋಜನೆಗಳು ಮಂಜೂರಾಗಿವೆ. ಈ ಯೋಜನೆಗಳಲ್ಲಿ ಸ್ಮಾರ್ಟ್ ರಸ್ತೆಗಳ ನಿರ್ಮಾಣ, ಕನ್ಸರ್ವೆನ್ಸಿಗಳ ಅಭಿವೃದ್ಧಿ, ಹಸರುರೀಕರಣ, ಉದ್ಯಾನವನಗಳ ಅಭಿವೃದ್ಧಿ, ಜಲಾಭಿಮುಖ ನದಿ ಯೋಜನೆಗಳು, ವಿದ್ಯುನ್ಮಾನ ನಿಯಂತ್ರಣ ಮಾಹಿತಿ ವ್ಯವಸ್ಥೆ, ಮತ್ತಿತರೆ ಅಭಿವೃದ್ದಿ ಕಾರ್ಯಗಳು ಅನುಷ್ಟಾನಗೊಳ್ಳಲಿವೆ.