- ಚಿತ್ರದುರ್ಗದಿಂದ ಶಿವಮೊಗ್ಗವರೆಗೆ (ದ್ವಿಪಥ ರಸ್ತೆಯಾಗಿ ಅಭಿವೃದ್ದಿ) – 330 ಕೋಟಿ
- ಎಂ.ಆರ್.ಎಸ್.ಸರ್ಕಲ್-ಲಯನ್ ಸಫಾರಿವರೆಗೆ (ಚತುಷ್ಪಥ ರಸ್ತೆಯಾಗಿ) & ಪುರಲೆಯಿಂದ-ವಿದ್ಯಾನಗರ ರೈಲ್ವೆ ಕ್ರಾಸಿಂಗ್ (ದ್ವಿಪಥ ರಸ್ತೆಯಾಗಿ) – 95.82 ಕೋಟಿ
- ಬೈಂದೂರು – ರಾಣೆಬೆನ್ನೂರುವರೆಗೆ – 205 ಕಿ.ಮಿ. -ರಾ.ಹೆದ್ದಾರಿಯಾಗಿದೆ 766ಸಿ.
- ಜೋಗ್ – ಭಟ್ಕಳ್ – 85.10 ಕಿ.ಮಿ. – ರಾ.ಹೆದ್ದಾರಿಯಾಗಿದೆ.
- ಶಿವಮೊಗ್ಗ – ತಡಸ – 171.52 ಕಿ.ಮಿ. -ರಾ.ಹೆದ್ದಾರಿಯಾಗಿದೆ.369ಇ
- ಶಿವಮೊಗ್ಗ – ಹೊನ್ನಾಳಿ-ಹರಿಹರ- ಮರಿಯಮ್ಮನಹಳ್ಳಿ-183 ಕಿ.ಮಿ. -ರಾ.ಹೆದ್ದಾರಿಯಾಗಿದೆ.
- ಸಾಗರ – ಮರಕುಟಿಕವರೆಗೆ – 67.2 ಕಿ.ಮಿ. -ರಾ.ಹೆದ್ದಾರಿಯಾಗಿದೆ.
- ಶರಾವತಿ ಹಿನ್ನಿರಿನಲ್ಲಿ ಸಿಗಂದೂರು ಬಳಿ ಕಳಸವಳ್ಳಿಯಲ್ಲಿ ಕೇಬಲ್ ಆಧಾರಿತ ಸೇತುವೆ ನಿರ್ಮಾಣ 2ವರೆ ಕಿ.ಮೀ. – 425 ಕೋಟಿ ವೆಚ್ಚದಲ್ಲಿ
- ಶ್ರೀರಾಂಪುರದಿಂದ ಮತ್ತೋಡು ಮೂಲಕ ಎನ್.ಹೆಚ್.13 ಸಂಪರ್ಕ ಕಲ್ಪಿಸುವ ರಾ.ಹೆ. ಹೊರ ವರ್ತುಲ ರಸ್ತೆ-34ಕಿ.ಮಿ. – 436 ಕೋಟಿ.
ಸಿಗಂದೂರು ಬಳಿ ಸೇತುವೆ:-368ಇ ರಾ.ಹೆ. ರಸ್ತೆ:
ಸಾಗರ ತಾಲ್ಲೂಕು ಸಿಗಂದೂರು ಬಳಿ ಶರಾವತಿ ಹಿನ್ನೀರಿಗೆ ರೂ. 423.15 ಕೋಟಿಗಳ ವೆಚ್ಚದಲ್ಲಿ 2.14 ಕಿಮಿ. ಉದ್ದದ 16 ಮೀ ಅಗಲದ (Extra
dosed Cable Bridge) ಸೇತುವೆ ನಿರ್ಮಾಣ ಕಾರ್ಯವು ಪ್ರಾರಂಭಗೊಂಡಿದೆ. ಈ ಸೇತುವೆ ನಿರ್ಮಾಣದಿಂದ ಶರಾವತಿ ಅಣೆಕಟ್ಟಿನ ಮುಳುಗಡೆಯಿಂದಾಗಿ ಸಂಪರ್ಕವಿಲ್ಲದೆ ಹಿಂದುಳಿದ ಹೊಳೆ ಬಾಗಿಲು, ಸಿಗಂದೂರು, ತುಮರಿ, ಕರೂರು, ಕಳಸವಳ್ಳಿ ಭಾಗದ ಅಭಿವೃದ್ಧಿ ಮತ್ತು ಎರಡು ಪ್ರಮುಖ ದೇವಸ್ಥಾನಗಳಾದ ಶ್ರೀ ಸಿಗಂದೂರು ಚೌಡೇಶ್ವರಿ ಮತ್ತು ಕೊಲ್ಲೂರಿನ ಶ್ರೀ ಮುಕಾಂಬಿಕೆ ದೇವಸ್ಥಾನಗಳಿಗೆ ನೇರ ಸಂಪರ್ಕ ದೊರೆಯಲಿದ್ದು, 80 ಕಿ.ಮೀ. ಅಧಿಕ ಬಳಸಿ ಬರುವ ಅನಿವಾರ್ಯತೆ ತಪ್ಪುತ್ತದೆ. ಹಾಗೂ ಇದರಿಂದಾಗಿ ವಾರ್ಷಿಕ 32 ಕೋಟಿಗಳಷ್ಟು ಇಂಧನ ಉಳಿತಾಯವಾಗಲಿದೆ. ಅಲ್ಲದೇ ಸಾಗರದಿಂದ ಸಿಗಂದೂರು ಮೂಲಕ ರಾ.ಹೆ. 766ಸಿ ಮರಕುಟಿಕ ತಲುಪುವ ಈ ರಸ್ತೆಯನ್ನು ರಾ.ಹೆ. 369ಇ ಎಂಬುದಾಗಿ ಘೋಷಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್.ಹೆಚ್.ಎ.ಐ) : (ತುಮಕೂರು-ಬೆಂಗಳೂರು ರಸ್ತೆ ಮಾದರಿಯಲ್ಲಿ)
ತುಮಕೂರಿನಿಂದ ಶ್ರೀರಾಂಪುರ(ಶಿವಮೊಗ್ಗ)ವರೆಗೆ 5300 ಕೋಟಿ ವೆಚ್ಚದಲ್ಲಿ 216 ಕಿ.ಮಿ. ಚತುಷ್ಪಥ ರಸ್ತೆಯ ನಿರ್ಮಾಣದಡಿ ಶಿವಮೊಗ್ಗ ಜಿಲ್ಲೆಯಲ್ಲಿ 56 ಕಿಮಿ.(ಬೆಟ್ಟದಹಳ್ಳಿಯಿಂದ ಶ್ರೀರಾಂಪುರವರೆಗೆ) ಉದ್ದದ ರಸ್ತೆಯನ್ನು 1085 ಕೋಟಿ ವೆಚ್ಚದಲ್ಲಿ ಚತುಷ್ಟಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ರೈಲ್ವೆ ನಿಲ್ದಾಣದ ಮುಂಭಾಗ ರಿಂಗ್ ರಸ್ತೆ ನಿರ್ಮಾಣ:
ಶಿವಮೊಗ್ಗ ನಗರದ ರೈಲ್ವೆ ಕಾಂಪೌಂಡ್ ನಿಂದ ಹೊಸಪೇಟೆ-ಶಿವಮೊಗ್ಗ ರಾ.ಹೆ.13 ರಸ್ತೆಯನ್ನು ಸಂಪರ್ಕಿಸುವ 100 ಅಡಿ ವರ್ತುಲ ರಸ್ತೆಯನ್ನು ಅಂದಾಜು ರೂ. 20.00 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ರಸ್ತೆ ನಿರ್ಮಾಣಕ್ಕೆ ರೂ. 9.28 ಕೋಟಿ ವಿನಿಯೋಗವಾದರೆ ಉಳಿದಂತೆ ಭೂಸ್ವಾಧೀನ, ವಿದ್ಯುತ್ ಕಂಬಗಳ ಸ್ಥಳಾಂತರ, ಯುಜಿಡಿ ಸ್ಥಳಾಂತರ, ಅರಣ್ಯೀಕರಣ, ತೋಟಗಾರಿಕೆ ಇತ್ಯಾದಿಗಳಿಗೆ ವೆಚ್ಚವಾಗಲಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದ್ದು, ನೂತನ ಯೋಜನೆಗಳಿರುವುದಿಲ್ಲ.
ಕೇಂದ್ರ ರಸ್ತೆ ನಿಧಿ (ಸಿ.ಆರ್.ಎಫ್) ಯೋಜನೆಯಡಿ 2013-14ನೇ ಸಾಲಿನಿಂದ ಶಿವಮೊಗ್ಗ ಜಿಲ್ಲೆಯ ಲೋಕೋಪಯೋಗಿ ವ್ಯಾಪ್ತಿಗೊಳಪಡುವ ಪ್ರಮುಖ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ವತಿಯಿಂದ 171.00 ಕೋಟಿಗಳ ವೆಚ್ಚದಲ್ಲಿ 28 ಕಾಮಗಾರಿಗಳ ಅನುಷ್ಟಾನಗೊಂಡಿದೆ.
ಹೊಸನಗರ ತಾಲ್ಲೂಕಿನಲ್ಲಿ 40 ಕೋಟಿ ಹಾಗೂ ಸಾಗರ ತಾಲ್ಲೂಕಿನಲ್ಲಿ 20 ಕೋಟಿ ವೆಚ್ಚದಲ್ಲಿ ಎರಡು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.
Economic Importance Scheme ಅಡಿಯಲ್ಲಿ 100 ಕೋಟಿ ವೆಚ್ಚದಲ್ಲಿ ಹೊಸನಗರ ತಾಲ್ಲೂಕಿನ ಬೆಕ್ಕೋಡಿಯಲ್ಲಿ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಪ್ರಸ್ತಾಪಿಸಲಾಗಿದೆ.