ಅಮೃತ್ ಯೋಜನೆ

ಅಮೃತ್ ಯೋಜನೆಯಡಿ ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಭದ್ರಾವತಿ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ವಿವಿಧ ಕಾಮಗಾರಿಗಳ ಅನುಷ್ಟಾನಕ್ಕೆ ಆಯ್ಕೆ.

ಶಿವಮೊಗ್ಗ ಮಹಾನಗರಪಾಲಿಕೆಗೆ ರೂ. 181.00 ಕೋಟಿ ಹಾಗೂ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ 150 ಕೋಟಿ ವೆಚ್ಚದಲ್ಲಿ ನೀರು ಸರಬರಾಜು, ಒಳಚರಂಡಿ ಅಭಿವೃದ್ಧಿ, ಉದ್ಯಾನವನ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾರ್ಯಗಳನ್ನು ಅನುಷ್ಟಾನಗೊಳಿಸಲಾಗುತ್ತದೆ.  ಈವರೆಗೆ ನೀರುಸರಬರಾಜು ಯೋಜನೆಯಡಿ ಶೇ 90ರಷ್ಟು, ಒಳಚರಂಡಿ ಕಾಮಗಾರಿಗಳಲ್ಲಿ ಶೇ. 80 ರಷ್ಟು, ಉದ್ಯಾನವನ ಅಭಿವೃದ್ಧಿಯಡಿ ಶೇ 100ರಷ್ಟು ಹಾಗೂ ಚರಂಡಿ ನಿರ್ಮಾಣ ಅಡಿಯಲ್ಲಿ ಶೇ 30ರಷ್ಟು ಪ್ರಗತಿಯಾಗಿದೆ.