ನೀರಾವರಿ ಯೋಜನೆಗಳು:
• ಶಿಕಾರಿಪುರ ತಾಲ್ಲೂಕಿನ ಉಡುಗಣಿ, ತಾಳಗುಂದ, ಹೊಸೂರು ಏತ ನೀರಾವರಿ ಯೋಜನೆ-825 ಕೋಟಿ
• ಶಿವಮೊಗ್ಗ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಹತ್ತಿರ ತುಂಗಾ ನದಿಯಿಂದ ನೀರನ್ನೆತ್ತಿ ಕುಂಸಿ ಮತ್ತು ಹಾರನಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಿ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಭಾಗಕ್ಕೆ ನೀರು ಒದಗಿಸುವ ಯೋಜನೆ – 350 ಕೋಟಿ
• ವರದಾ ನದಿಯಿಂದ ಸೊರಬ ತಾಲ್ಲೂಕು ಮೂಗೂರು ಕೆರೆಗೆ ನೀರು ತುಂಬಿಸುವ ಯೋಜನೆ – 100 ಕೋಟಿ
• ಸೊರಬ ತಾಲ್ಲೂಕು ಮೂಡಿ ಏತ ನೀರಾವರಿ ಯೋಜನೆ 285 ಕೋಟಿ.
• ಸಿದ್ದಾಪುರ-ಸೌಕೂರು ಏತ ನೀರಾವರಿ ಯೋಜನೆ – 80 ಕೋಟಿ
2. ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಡಿಯಲ್ಲಿ 293.57 ಕೋಟಿ ವೆಚ್ಚದಲ್ಲಿ 688 ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ದೊರಕಿಸಿಕೊಡಲಾಗಿದೆ:
• ರಸ್ತೆ – 261 ಕಾಮಗಾರಿ – 174.98 ಕೋಟಿ
• ಸಮುದಾಯ ಭವನ – 427 ಕಾಮಗಾರಿ – 118.59 ಕೋಟಿ
3. ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮ ಪರಿಮಿತಿಯಲ್ಲಿ ವಿಮಾನ ನಿಲ್ದಾಣವನ್ನು ರೂ. 220.00 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. 758 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವ ಈ ವಿಮಾನ ನಿಲ್ದಾಣದಲ್ಲಿ 2050 ಮೀ ಉದ್ದ 30 ಮೀ ಅಗಲದ ರನ್ ವೇ, 184 ಮೀ ಅಗಲ 25 ಮೀ ಉದ್ದದ ಟ್ಯಾಕ್ಸಿ ವೇ, 182 ಮೀ ಉದ್ದ 25 ಮೀ; ಅಗಲದ ಐಸೋಲೇಶನ್ ಬೇ, 132 ಮೀ ಉದ್ದ 104 ಮೀ ಅಗಲದ ಏಪ್ರಾನ್, 862 ಮೀ ಉದ್ದ 18 ಮೀ ಅಗಲದ ಅಪ್ರೋಚ್ ರಸ್ತೆ, 14557 ಮೀ; ಉದ್ದ 2.40 ಮೀ; ಎತ್ತರದ ಕಾಂಪೌಂಡ್ ವಾಲ್, 2580 ಚ.ಮಿ. ನ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ ಹಾಗೂ 935 ಚ.ಮಿ.ನ ಎ.ಟಿಸಿ. ಟವರ್ ಕಟ್ಟಡ ಕಾಮಗಾರಿಗಳು ಮೊದಲನೇ ಪ್ಯಾಕೇಜ್ ನಲ್ಲಿರುತ್ತದೆ.