ಕರಾವಳಿಯ ಕೊನೆಯ ಶ್ರೀ ಕೋಟಿ ಚೆನ್ನಯ್ಯ ಗರಡಿಗೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿ, ಕನ್ನಡ ಕಾವ್ಯಗಳಲ್ಲಿ ನವ್ಯತೆಯನ್ನು ತಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸಾಹಿತ್ಯ ರಚನೆ ಮಾಡಿದ ಮೊಗೇರಿ ಶ್ರೀ ಗೋಪಾಲ ಕೃಷ್ಣ ಅಡಿಗ ಅವರ ಸ್ಮರಣಾರ್ಥವಾಗಿ ಬೈಂದೂರಿನ ಕೇಂದ್ರ ಸ್ಥಾನದಲ್ಲಿ ₹4.95 ಕೋಟಿ ವೆಚ್ಚದಲ್ಲಿ ಪುರಭವನಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.