Press Statement on VISL Issue

Press Statement by Sri. B.Y. Raghavendra, Hon’ble Member of Parliament, Shimoga Constituency after meeting with Hon’ble Chief Minister of Karnataka Sri Siddaramaiah in connection with VISL issue.

“ಪತ್ರಿಕಾ ಪ್ರಕಟಣೆಗಾಗಿ”

ದಿನಾಂಕ: 21-10-2013 ರಂದು ಬೆಂಗಳೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕಿಮ್ಮನೆ ರತ್ನಕರ್‌ರವರು, ರಾಜ್ಯ ಸಭಾ ಸದಸ್ಯರಾದ ಶ್ರೀ ಆಯನೂರು ಮಂಜುನಾಥ್‌ರವರು ಹಾಗೂ ಶಾಸಕರಾದ ಶ್ರೀಮತಿ ಶಾರಾದಾ ಪೂರ್‍ಯಾನಾಯ್ಕ್, ಶ್ರೀ ಅಪ್ಪಾಜಿಗೌಡರು, ಹಾಗೂ ಶ್ರೀ ಸಿದ್ದರಾಮಣ್ಣರವರು, ಕಾರ್ಖಾನೆಯ ಕಾರ್ಮಿಕ ಮುಖಂಡರೊಂದಿಗೆ ವಿಐಎಸ್‌ಎಲ್ ಕಾರ್ಖಾನೆಯ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.

ಭೇಟಿ ಸಂದರ್ಭದಲ್ಲಿ ಮಾನ್ಯ ಶ್ರೀ ಬಿ.ವೈ ರಾಘವೇಂಧ್ರ, ಸಂಸದರು, ಈ ಕೆಳಕಂಡ ಅಂಶಗಳ ಬಗ್ಗೆ ಪ್ರಸ್ತಾಪಿಸಿದರು.

1. ಭದ್ರಾವತಿ ವಿ.ಐ.ಎಸ್.ಎಲ್.ಗೆ ಕರ್ನಾಟಕ ಸರ್ಕಾರದಿಂದ ಗಣಿಯನ್ನು ನೀಡುವ ಬಗ್ಗೆ ಒಪ್ಪಿಗೆ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ನೀಡುವುದು.
2. ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಬಗ್ಗೆ ಈಗಾಗಲೇ ಕರೆದಿರುವ ಜಾಗತಿಕ ಟೆಂಡರ್ ಪ್ರಕ್ರಿಯೆಯನ್ನು ಕೈಬಿಡಲು ಕೇಂದ್ರ ಸರ್ಕಾರದ ಉಕ್ಕು ಸಚಿವರಾದ ಶ್ರೀ ಬೇನಿ ಪ್ರಸಾದ ವರ್ಮ ಹಾಗೂ ಸೇಲ್ ಛೇರ್‍ಮನ್ ಶ್ರೀ ಸಿ.ಎಸ್. ವರ್ಮಾ ಇವರಿಗೆ ಕರ್ನಾಟಕ ಸರ್ಕಾರದಿಂದ ಪತ್ರ ಬರೆಯಲು ಒತ್ತಾಯಿಸಲಾಯಿತು.
3. ವಿಐಎಸ್‌ಎಲ್ ಕಾರ್ಖಾನೆಯನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲು ಹೆಚ್ಚಿನ ಅನುದಾನ ನೀಡಲು ಭಾರತೀಯ ಉಕ್ಕು ಪ್ರಾಧಿಕಾರದ ಮೂಲಕ ಕ್ರಮ ಕೈಗೊಳ್ಳಲು ಕೋರಲಾಯಿತು.
ಈ ಮೇಲ್ಕಂಡ ಅಂಶಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಸಕಾರತ್ಮಕವಾಗಿ ಸ್ಪಂದಿಸಿರುತ್ತಾರೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,

ಸಹಿ/-
(ಬಿ.ವೈ. ರಾಘವೇಂದ್ರ)Leave a Reply