- October 22, 2013
- Posted by: admin
- Category: Media Watch
No Comments
ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ರವರು ದಿನಾಂಕ: 22.10.2013 ರಂದು ಬೆಳಿಗ್ಗೆ ಶಿವಮೊಗ್ಗದ ವಿನೋಬ ನಗರ ಕಾಶಿ ಪುರ ಮುಖ್ಯ ರಸ್ತೆಯ ಹುಚ್ಚುರಾಯ ಸ್ವಾಮಿ ಕಾಲೋನಿಗೆ ಬೇಟಿ ನೀಡಿ, ಇತ್ತೀಚೆಗೆ ರೈಲ್ವೆ ಇಲಾಖೆಯವರು ಇಲ್ಲಿನ ೮೦ ಕುಟುಂಬಗಳಿಗೆ ಮನೆ ತೆರವು ಮಾಡುವಂತೆ ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಬಹಳ ವರ್ಷಗಳಿಂದ ವಾಸ ಮಾಡುತ್ತಿರುವ ಇವರಿಗೆ ಕೂಡಲೇ ಆಶ್ರಯ ನಿವೇಶನಗಳನ್ನು ಮಂಜೂರು ಮಾಡುವ ಕುರಿತಂತೆ ಸಂಬಂಧಿಸಿದವರೊಂದಿಗೆ ಚರ್ಚಿಸುವುದಾಗಿ ಮಾನ್ಯ ಸಂಸದರು ತಿಳಿಸಿದರು.
ಭೇಟಿಯ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀ ಮಾಲತೇಶ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಶ್ರೀ ಜ್ಯೋತಿ ಪ್ರಕಾಶ್, ಸ್ಥಳೀಯರಾದ ಶ್ರೀ ಬಾಬಾನಾಯ್ಕ, ಶ್ರೀ ರಾಜಾನಾಯ್ಕ, ಲಕ್ಷ್ಮೀಬಾಯಿ ಮತ್ತಿತರರು ಹಾಜರಿದ್ದರು.