ರಾಷ್ಟ್ರೀಯ ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ :
ಸಂಪೂರ್ಣ ಸಾರಿಗೆ ಸೌಲಭ್ಯಗಳೇ ನಮ್ಮ ನಾಡಿನ ಅಭಿವೃದ್ಧಿಯ ಸಂಕೇತಗಳು. ಭೂ ಸಾರಿಗೆ ವಿಚಾರದಲ್ಲಿ ರಾಷ್ಟ್ರೀಯ ಅನುದಾನ ತುರುವುದು ತುಂಬಾ ಕ್ಲಿಷ್ಟಕರ ವಿಷಯ.

ರಾಜ್ಯ ಸರ್ಕಾರದ ಬೆಂಬಲ, ಜನರ ಒತ್ತಾಸೆ ಹಾಗೂ ನನ್ನ ನಿರಂತರ ಪರಿಶ್ರಮದಿಂದ ತುಮಕೂರಿನಿಂದ ಹೊನ್ನಾವರ ದವರೆಗಿನ ಎನ್.ಹೆಚ್-೨೦೬ರಲ್ಲಿ ೩೪೮ ಕಿ.ಮೀ. ರಸ್ತೆಯನ್ನು ಅಂದಾಜು ೮೦೦ ಕೋಟಿ ರೂಪಾಯಿ ವೆಚ್ಚದ ರಾಷ್ಟ್ರೀಯ ರಸ್ತೆ ಕಾಮಗಾರಿಗೆ ವಿಶ್ವ ಬ್ಯಾಂಕ್ ನೆರವಿನಡಿ ಮಂಜೂರಾತಿ ಪಡೆದಿದ್ದೇನೆ. ಇನ್ನು ಎರಡು ವರ್ಷಗಳಲ್ಲಿ ಅದರ ಪ್ರತಿಫಲ ಜನರಿಗೆ ದೊರೆಯುವುದರಲ್ಲಿ ಸಂದೇಹವೇ ಇಲ್ಲ. ಇದರಿಂದಾಗಿ ಹಲವು ರೀತಿಯ ಸೌಲಭ್ಯ ದೊರೆಯಲಿದೆ. ಮುಖ್ಯವಾಗಿ ಜೋಗ, ಕೆಳದಿ, ಇಕ್ಕೇರಿ, ಆಗುಂಬೆ, ಮಂಡಗದ್ದೆ, ಗುಡವಿ, ಕೊಲ್ಲೂರು, ಮುಂತಾದ ಪ್ರವಾಸೀ ತಾಣಗಳಿಗೆ ಸಂಪರ್ಕ ಸೌಲಭ್ಯ ಉತ್ತಮಗೊಂಡು ಪ್ರವಾಸೋಧ್ಯಮ ಬೆಳೆಯಲು ಅನುಕೂಲವಾಗುತ್ತದೆ. ಅಲ್ಲದೆ ಸಾರಿಗೆ-ಸಂಪರ್ಕ ಸುಲಲಿತವಾಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿದೆ.

ಇದಲ್ಲದೆ, ರಸ್ತೆ ಕಾಮಗಾರಿಗೆ ಈ ಕೆಳಕಂಡ ಮಂಜೂರಾತಿ ಪಡೆಯಲಾಗಿದೆ.ಅದರಲ್ಲಿ ಕೆಲವು ರಾಜ್ಯ ಬಜೆಟ್ ಹಣವೂ ಸೇರಿದೆ. ಕಾಮಗಾರಿಗೆ ದೊರಕುವ ಹಣ ಯಾವ ಮೂಲದ್ದಾದರೂ ನನ್ನ ಪ್ರಯತ್ನವಂತೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಟ್ಟದಲ್ಲಿ ನಿರಂತರವಾಗಿ ಮುಂದುವರೆಯುತ್ತದೆ. ವಿಶೇಷವೆಂದರೆ ಸುಮಾರು ೩೦೦-೪೦೦ ಕೋಟಿ ರೂ.ಗಳ ಕಾಮಗಾರಿಗೆ ಒಂದು ವರ್ಷದ ಅವಧಿಯಲ್ಲಿ ಮಂಜೂರಾತಿ ಪಡೆದು ಟೆಂಡರ್ ಕರೆಯಲಾಗಿದೆ.

ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ ಶಿವಮೊಗ್ಗ ತಾಲ್ಲೂಕಿನ ಮಲವಗೊಪ್ಪ ದಿಂದ ಆಯನೂರುವರೆಗಿನ ಹಾಗೂ ಸಾಗರ ತಾಲ್ಲೂಕಿನ ಉಳ್ಳೂರಿನಿಂದ ಸಿರಿವಂತೆವರೆಗಿನ ಒಟ್ಟು ೪೨ ಕಿಮೀ ರಸ್ತೆಯನ್ನು ರೂ.೫೯.೦೯ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ – ೧೩ರಲ್ಲಿ ಶಿವಮೊಗ್ಗ ತಾಲ್ಲೂಕಿನ ಬಿ.ಬೀರನಹಳ್ಳಿಯಿಂದ ಸಹ್ಯಾದ್ರಿ ಕಾಲೇಜ್‌ವರೆಗಿನ ಹಾಗೂ ಎನ್.ಟಿ.ರಸ್ತೆಯ ರಿಂಗ್ ರೋಡ್‌ನಿಂದ ಸಕ್ರೆಬೈಲುವರೆಗಿನ ಒಟ್ಟು ೩೮.೪೦ ಕಿಮೀ ರಸ್ತೆಯನ್ನು ರೂ.೨೦.೯೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ.Leave a Reply