B.Y. Raghavendra

ಭರವಸೆಯ ಬೆಳ್ಳಿ ಬೆಳಕು
 
ಕ್ರಿಯಾಶೀಲ ಸಂಸದ-ಶಾಸಕ, ಅಭಿವೃದ್ಧಿಯ ಹರಿಕಾರ, ದೇಶದ ಭವಿಷ್ಯದ ಬೆಳ್ಳಿ ಬೆಳಕು… ಈ ಎಲ್ಲಾ ಮಾತುಗಳಿಗೆ ಅನ್ವರ್ಥಕ ಎನ್ನುವಂತೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುವ ಚೇತನ ಶ್ರೀ ಬೂಕನಕೆರೆ ಯಡಿಯೂರಪ್ಪ ರಾಘವೇಂದ್ರ. ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರ ಸುಪುತ್ರರಾಗಿರುವ ಇವರು ಜನರ ಮಧ್ಯೆ ಬೆಳೆದು-ಅರಳಿ ನಿಂತ ಯುವ ನಾಯಕ. ಬೇರು ಮಟ್ಟದಲ್ಲಿ ಪಕ್ಷದ ಸಂಘಟನೆ ಜತೆಗೆ ಬೆಳಗಿದ ಯುವ ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಎ.ಬಿ.ವಿ.ಪಿಯ ಶಿಸ್ತಿನ ಸಿಪಾಯಿ, ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಶಿಕಾರಿಪುರ ಪುರಸಭೆಯ ಸದಸ್ಯರಾಗಿ, ಹೀಗೆ ಹಂತ ಹಂತವಾಗಿ ಜನಸೇವೆಯ ಮೆಟ್ಟಿಲುಗಳೆರುತ್ತಾ ಮೂರು ಬಾರಿ ಸಂಸದರಾಗಿ, ಒಂದು ಬಾರಿ ಶಾಸಕರಾಗಿ ಸಮಾಜ ಸೇವೆಯಲ್ಲಿ ಇವರು ತೊಡಗಿದ್ದಾರೆ. 
 
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಮಣ್ಣಿನಲ್ಲಿ ಹತ್ತಾರು ರಾಷ್ಟçನಾಯಕರು ಅರಳಿದ್ದಾರೆ. ಈ ಪೈಕಿ ಶ್ರೇಷ್ಠ ಸಾಧನೆಗೈದವರು ನಮ್ಮ ಹೆಮ್ಮೆಯ  ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು. ಅವರು ತೋರುತ್ತಿರುವ ಜನ ಸೇವೆಯ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಾ, ದೇಶದ ಶ್ರೇಷ್ಠ ಸಂಸದೀಯಪಟುವಾಗಿ ಮೂಡುತ್ತಿದ್ದಾರೆ ಶ್ರೀ ಬಿ ವೈ ರಾಘವೇಂದ್ರ. ತಮ್ಮ ಕ್ರಿಯಾಶೀಲತೆ, ಕಾರ್ಯತತ್ಪರತೆ ಹಾಗೂ ನಾಯಕತ್ವ ಗುಣದಿಂದ ಈಗಾಗಲೆ ಪಕ್ಷದ ರಾಷ್ಟ್ರೀಯ ನಾಯಕರ ಗಮನ ಸೆಳೆದಿರುವ ಶ್ರೀ ಬಿ ವೈ ರಾಘವೇಂದ್ರ ನಮ್ಮ ನಾಡಿನ ಹೆಮ್ಮೆಯ ಯುವ ನಾಯಕ.
 
ಚಲನಶೀಲ, ಯುವ ಶಕ್ತಿ, ಚಿಂತನ ಶೀಲ ನಾಯಕ, ಹಾಗೂ ಚೈತನ್ಯ ಶಕ್ತಿಯ ಜನಸೇವಕ ಹೀಗೆ ತ್ರಿವೇಣಿ ಸಂಗಮಗಳ ಸಂಕೇತದಂತಿರುವ ಶ್ರೀ ರಾಘವೇಂದ್ರ, ರಾಜಕೀಯ, ಸಮಾಜ ಸೇವೆ, ಶಿಕ್ಷಣ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಇವರು ಸಕ್ರಿಯರಾಗಿದ್ದಾರೆ. ಹಂತ ಹಂತವಾಗಿ ಜನಸೇವೆಯೊಂದಿಗೆ ಲಕ್ಷಾಂತರ ಜನರ ಮನ ಗೆದ್ದಿರುವ ಶ್ರೀ ರಾಘವೇಂದ್ರ ಅವರ ಸಾಧನೆಯ ಸಿಂಹಾವಲೋಕನದ ಝಲಕ್ ಇಲ್ಲಿದೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ನೀರಾವರಿ, ಪ್ರವಾಸೋದ್ಯಮ, ರೈಲ್ವೆ, ವಿಮಾನಯಾನ ಹೀಗೆ ಏನುಂಟು ಏನಿಲ್ಲ? ಕಳೆದ ಒಂದು ದಶಕದ ಅವಧಿಯಲ್ಲಿ, ಜನ ಪ್ರತಿನಿಧಿಯಾಗಿ, ಇವರು ಶಿವಮೊಗ್ಗವನ್ನು ಒಂದು ಮಾದರಿ ಕ್ಷೇತ್ರವಾಗಿ ರೂಪುಗೊಳಿಸಿದ್ದಾರೆ.
 
ನಮ್ಮ ಕನ್ನಡ ಮಣ್ಣಿನಲ್ಲಿ ಅರಳಿ ಈಗ ದೇಶಾದ್ಯಂತ ತಮ್ಮ ಅಭಿವೃದ್ಧಿ ಸುದ್ದಿಗಳ ಮೂಲಕ ಸುದ್ದಿ ಮಾಡುತ್ತಿರುವ ಶ್ರೀ ರಾಘವೇಂದ್ರ ಅವರ ಸಾಧನೆಯ ಸುಂದರ ಪುಟಗಳು ನಿಮಗಾಗಿ ಇಲ್ಲಿವೆ

A visionary statesman

Our proud Member of Parliament B Y Raghavendra stands true testimony to a pro-active statesman. He has spearheaded many developmental projects and proved himself as a youth icon of the country. He is grown as prominent statesman and gained confidence of people cutting across the party line by following footstep of his father and popular, Ex Chief Minister Sri B S Yediyurappa, the son of the soil.

Mr. Raghavendra has also made tremendous effort to organise the BJP from grass-root level. He has emerged as an able mass leader by climbing career ladder through serving in various positions like senate member of Kuvempu University, Shikaripur Town Municipal member, three-time member of Parliament and the member of Legislative Assembly.

Several national leaders have emerged in the soil of Shivamogga, the gateway of Malnad region. Our proud Ex Chief Minister B S Yediyurappa is one among them. Raghavendra is also emerging as a top Parliamentarian and engaged in the path of development like his father. He has already attracted attention of BJP national leaders through his activities and leadership skills. He is the future star in making in the arena of national politics.

BYR is the symbol of good governance, all round development and a trouble shooter for the people of malnad region. He is seen as a power of youth and source of inspiration. He has become active in all social sectors including education, health. Raghavendra has won the hearts of people through his social activities and unfolding here the story of his achievements in all the sectors including education, health, basic infrastructure, irrigation, tourism, railways, civil aviation………. Thus, he has turned Shivamogga into a model Lok Sabha constituency as people’s representative during the last one decade.

Raghavendra has shown that he is a leader ready to carve a niche for himself in politics through blossoming in the soil of Karnataka.

Latest Events

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ನಡೆದ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದರು.

ಶಿವಮೊಗ್ಗ ನಗರದ ಸುಬ್ಬಯ್ಯ ಆಸ್ಪತ್ರೆ ಮುಂಭಾಗದಲ್ಲಿ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ಲಿಮಿಟೆಡ್ ಕಂಪನಿಯ ನೂತನ ಔಟ್ ಲೆಟ್ ಮೈಸೂರು ಸ್ಯಾಂಡಲ್ ಮಾರಾಟ ಮಳಿಗೆ ಉದ್ಘಾಟಿಸಿದ ಬಿವೈಆರ್‌

ಶಿಕಾರಿಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿದ ಸಂಸದರು.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಗಿನಲ್ಲಿಯಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ವಿವೇಚನಾತ್ಮಕ ಅನುದಾನದಡಿ ನಿರ್ಮಿಸಿದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಬಿ ವೈ ರಾಘವೇಂದ್ರ

ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ, ವಿಕಾಸ ಟ್ರಸ್ಟ್ ಮತ್ತು ಆರೋಗ್ಯ ಭಾರತಿ ಇವರ ಸಹಯೋಗದಲ್ಲಿ ನಡೆದ ಧನ್ವಂತರಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದರು.

ಶಿವಮೊಗ್ಗ ಜಿಲ್ಲೆಯಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್ ಅವರೊಂದಿಗೆ ಭಾಗವಹಿಸಿದ ಸಂಸದರು.

ಶಿವಮೊಗ್ಗದ ಜನ ಶಿಕ್ಷಣ ಸಂಸ್ಥಾನ ಸಂಸ್ಥೆಯ ವತಿಯಿಂದ ನಡೆದ ಯಶಸ್ವಿ ಫಲುನುಭವಿಗಳ ಸಮಾವೇಶದಲ್ಲಿ ಭಾಗವಹಿಸಿದ ಸಂಸದರು

ಜನಮನ ಗೆದ್ದ ಯುವ ನೇತಾರ

BYR-BIRTHDAY-PRINT-FILEDownload

ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಭೇಟಿಯಾಗಿ ತ್ಯಾವರೆಕೊಪ್ಪದ ಹುಲಿ-ಸಿಂಹ ಸಫಾರಿಗೆ ಸೆಂಟ್ರಲ್‌ ಜೂ ಅಥಾರಿಟಿಯಿಂದ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡುವಂತೆ ಮತ್ತು ವನ್ಯಜೀವಿ ಸಂರಕ್ಷಣಾ ಕೇಂದ್ರ ಸ್ಥಾಪನೆಯ ಪ್ರಸ್ತಾವನೆ ಸಲ್ಲಿಸಲಾಯಿತು.

ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಭೇಟಿಯಾಗಿ ನೂತನ ಶಿಕ್ಷಣ ಪದ್ಧತಿಯ ಕುರಿತು ಚರ್ಚೆ ನಡೆಸಿದ ಸಂಸದರು.

ದೆಹಲಿಯಲ್ಲಿ, ರಾಜ್ಯದ ಕೃಷಿ ಸಚಿವ ಬಿ ಸಿ ಪಾಟೀಲ್‌ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು.

ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದ್ದು, ಭಾರತೀಯ ಮೃಗಾಲಯ ಪ್ರಾಧಿಕಾರದಿಂದ 120 ಹೆಕ್ಟೇರ್ ಪ್ರದೇಶದ ಅಭಿವೃದ್ಧಿಗೆ ಒಪ್ಪಿಗೆ ಕೂಡ ದೊರೆತಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಂದಿಗೆ ನೂತನ ಗೃಹಸಚಿವ ಆರಗ ಜ್ಞಾನೇಂದ್ರ
ಅವರನ್ನು ಅಭಿನಂದಿಸಿದ ಸಂಸದರು.

ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಸಹಭಾಗಿತ್ವದಲ್ಲಿ, ಸೇವಾಭಾರತಿ ಕರ್ನಾಟಕ, ಪ್ರೇರಣಾ ಟ್ರಸ್ಟ್, ಪಿ.ಇ.ಎಸ್, ಆರೋಗ್ಯ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬದವರಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನ ನಡೆಸಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ “ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಇತರ ಯೋಜನೆಗಳ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು/ಉಪಾಧ್ಯಕ್ಷರು/ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ” ದಲ್ಲಿ ಭಾಗವಹಿಸಿದ ಸಂಸದರು.

ಶಿಕಾರಿಪುರದ ಅಂಜನಾಪುರ ಜಲಾಶಯಕ್ಕೆ ಭಾಗೀನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದರು.

ಶಿಕಾರಿಪುರ ತಾಲ್ಲೂಕಿನ ಗಾಮ ಗ್ರಾಮದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್
ವಿತರಣೆ ಮಾಡಿದ ಸಂಸದರು.

ಕರ್ನಾಟಕದಿಂದ ಕೇಂದ್ರ ಸಚಿವರಾಗಿ ನೇಮಕಗೊಂಡಿರುವ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಎ.ನಾರಾಯಣ್ ಸ್ವಾಮಿ ಮತ್ತು ಭಗವಂತ್‌ ಖೂಬ ಅವರಿಗೆ ಅಭಿನಂದನೆ ಸಲ್ಲಿಸಿದ ಸಂಸದರು.

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ 2.10 ಕೋಟಿ ರೂ. ವೆಚ್ಚದಲ್ಲಿ 35 ವಾರ್ಡ್ಗಳಲ್ಲಿ ಒಟ್ಟು 46460 ಆಹಾರ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

“ಒಂದು ನೆನಪು” ಶಿಕಾರಿಪುರ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ 1975 ತುರ್ತು ಪರಿಸ್ಥಿತಿ ಕರಾಳ ದಿನಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

Social Media Connect

 

Media Coverage

Connect me

  • Maithri Nilaya,
    7th Cross, 3rd Phase, 2nd Block, 
    Vinobanagar Shivamogga - 577 201
  • +91 97318 53100