ರಾಜ್ಯ ಸರ್ಕಾರದಿಂದ ದೊರಕಿಸಿಕೊಡಲಾದ ಯೋಜನೆಗಳು

ನೀರಾವರಿ ಯೋಜನೆಗಳು: 

ಶಿಕಾರಿಪುರ ತಾಲ್ಲೂಕಿನ ಉಡುಗಣಿ, ತಾಳಗುಂದ, ಹೊಸೂರು ಏತ ನೀರಾವರಿ ಯೋಜನೆ-825 ಕೋಟಿ 

ಶಿವಮೊಗ್ಗ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಹತ್ತಿರ ತುಂಗಾ ನದಿಯಿಂದ ನೀರನ್ನೆತ್ತಿ ಕುಂಸಿ ಮತ್ತು ಹಾರನಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಿ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಭಾಗಕ್ಕೆ ನೀರು ಒದಗಿಸುವ ಯೋಜನೆ – 350 ಕೋಟಿ 

ವರದಾ ನದಿಯಿಂದ ಸೊರಬ ತಾಲ್ಲೂಕು ಮೂಗೂರು ಕೆರೆಗೆ ನೀರು ತುಂಬಿಸುವ ಯೋಜನೆ – 100 ಕೋಟಿ

ಸೊರಬ ತಾಲ್ಲೂಕು ಮೂಡಿ ಏತ ನೀರಾವರಿ ಯೋಜನೆ 285 ಕೋಟಿ.

ಸಿದ್ದಾಪುರ-ಸೌಕೂರು ಏತ ನೀರಾವರಿ ಯೋಜನೆ – 80 ಕೋಟಿ


2. ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಡಿಯಲ್ಲಿ 293.57 ಕೋಟಿ ವೆಚ್ಚದಲ್ಲಿ 688 ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ದೊರಕಿಸಿಕೊಡಲಾಗಿದೆ:

ರಸ್ತೆ                                   – 261       ಕಾಮಗಾರಿ 174.98 ಕೋಟಿ

ಸಮುದಾಯ ಭವನ 427      ಕಾಮಗಾರಿ 118.59 ಕೋಟಿ

3. ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮ ಪರಿಮಿತಿಯಲ್ಲಿ ವಿಮಾನ ನಿಲ್ದಾಣವನ್ನು ರೂ. 220.00 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. 758 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವ ಈ ವಿಮಾನ ನಿಲ್ದಾಣದಲ್ಲಿ 2050 ಮೀ ಉದ್ದ 30 ಮೀ ಅಗಲದ ರನ್ ವೇ, 184 ಮೀ ಅಗಲ 25 ಮೀ ಉದ್ದದ ಟ್ಯಾಕ್ಸಿ ವೇ, 182 ಮೀ ಉದ್ದ 25 ಮೀ; ಅಗಲದ ಐಸೋಲೇಶನ್ ಬೇ, 132 ಮೀ ಉದ್ದ 104 ಮೀ ಅಗಲದ ಏಪ್ರಾನ್, 862 ಮೀ ಉದ್ದ 18 ಮೀ ಅಗಲದ ಅಪ್ರೋಚ್ ರಸ್ತೆ, 14557 ಮೀ; ಉದ್ದ 2.40 ಮೀ; ಎತ್ತರದ ಕಾಂಪೌಂಡ್ ವಾಲ್, 2580 ಚ.ಮಿ. ನ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ ಹಾಗೂ 935 ಚ.ಮಿ.ನ ಎ.ಟಿಸಿ. ಟವರ್ ಕಟ್ಟಡ ಕಾಮಗಾರಿಗಳು ಮೊದಲನೇ ಪ್ಯಾಕೇಜ್ ನಲ್ಲಿರುತ್ತದೆ.