ರೈಲ್ವೆ ಹಾಗೂ ಇತರೆ ಪ್ರಮುಖ ಯೋಜನೆಗಳು

ರೈಲ್ವೆ ಯೋಜನೆಗಳು
1. ಶಿವಮೊಗ್ಗ-ತಾಳಗುಪ್ಪ ಬ್ರಾಡ್‍ಗೇಜ್ ಪರಿವರ್ತನೆ.
2. ತಾಳಗುಪ್ಪ -ಮೈಸೂರು, ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ದಿನನಿತ್ಯ ಓಡಾಟ.
3. ತಾಳಗುಪ್ಪದಿಂದ ಬೆಂಗಳೂರಿಗೆ ಹಾಗೂ ಮೈಸೂರಿಗೆ ನೇರ ರೈಲಿನ ಓಡಾಟ.
4. ಶಿವಮೊಗ್ಗ-ಹರಿಹರ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ.
5. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಮಾರ್ಗ ಸಮೀಕ್ಷೆಗೆ ಮಂಜೂರಾತಿ.
6. ಬೀರೂರು-ಶಿವಮೊಗ್ಗ ಮಾರ್ಗದ ಡಬ್ಲಿಂಗ್‍ಗೆ ಸರ್ವೇ ಕಾರ್ಯಕ್ಕೆ ಮಂಜೂರಾತಿ.
7. ಕುಂಸಿ, ಆಯನೂರು ಭಾಗದ ಜನರ ಅನುಕೂಲಕ್ಕಾಗಿ ಕುಂಸಿಯಲ್ಲಿ ಎಲ್ಲಾ ಟ್ರೇನುಗಳಿಗೆ ನಿಲುಗಡೆ ಮಾಡಲಾಗಿದೆ.
8. ಶಿವಮೊಗ್ಗ ಹೊನ್ನಾಳಿ ರಸ್ತೆ ರೈಲ್ವೆ ಓವರ್ ಬ್ರಿಡ್ಜ್, ನಿರ್ಮಾಣ.
9. ಭದ್ರಾವತಿ ಟಿಕೆ ರಸ್ತೆ ರೈಲ್ವೆ ಓವರ್ ಬ್ರಿಡ್ಜ್, ನಿರ್ಮಾಣ.
10. ಶಿವಮೊಗ್ಗ-ಭದ್ರಾವತಿ ರೈಲ್ವೆ ನಿಲ್ದಾಣಗಳ ಆಧುನೀಕರಣ ಮತ್ತು ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ.
11. ಸಾಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸದೆ.
ಇತರೆ ಪ್ರಮುಖ ಯೋಜನೆಗಳು
1. ಜಿಲ್ಲೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ 15ಕ್ಕೂ ಹೆಚ್ಚು ಬಿ.ಎಸ್.ಎನ್.ಎಲ್. ಮೊಬೈಲ್ ಟವರ್‍ಗಳ ಸ್ಥಾಪನೆಗೆ ಕ್ರಮ.
2. ತುಂಗಾ ನದಿಗೆ ಪ್ರವಾಹ ತಡೆಗೋಡೆ ನಿರ್ಮಾಣ-70 ಕೋಟಿ.
3. 2010ರ ಅಕ್ಟೋಬರ್‍ನಲ್ಲಿ ಶಿವಮೊಗ್ಗಕ್ಕೆ ಕೇಂದ್ರೀಯ ವಿದ್ಯಾಶಾಲೆ ಮಂಜೂರಾತಿ. ಈ ಕೇಂದ್ರಿಯ ವಿದ್ಯಾಲಯಕ್ಕೆ ಸಂತೆಕಡೂರಿನಲ್ಲಿ 9.36 ಎಕರೆ ಜಾಗವನ್ನು ನೀಡಲಾಗಿದೆ.
4. ಶಿವಮೊಗ್ಗ ಜಿಲ್ಲೆಗೆ ಎಫ್. ಎಂ. ಕೇಂದ್ರ ಮಂಜೂರಾತಿಗೆ ಪ್ರಯತ್ನಿಸಿ, ಜಿಲ್ಲೆಗೆ 3 ಖಾಸಗಿ ಎಫ್.ಎಂ. ಕೇಂದ್ರಗಳ ಸ್ಥಾಪನೆಗೆ ಮಂಜೂರಾತಿ ದೊರಕಿಸಿಕೊಡಲಾಯಿತಾದರೂ, ಖಾಸಗಿ ಸಂಸ್ಥೆಗಳು ಈ ಸೌಲಭ್ಯವನ್ನು ಪಡೆಯುವಲ್ಲಿ ವಿಫಲರಾದರು. ಈ ನಿಟ್ಟಿನಲ್ಲಿ ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಎಫ್.ಎಂ. ಸೌಲಭ್ಯವನ್ನು ಮಂಜೂರು ಮಾಡಿಸಲಾಗಿದ್ದು, ಶಿವಮೊಗ್ಗ ಟಿ.ವಿ. ಕೇಂದ್ರಕ್ಕೆ ಎಫ್.ಎಂ. ಕೇಂದ್ರ ಮಂಜೂರ್ಮಾಡಲು ಪ್ರಸ್ತಾವನೆ ಸಲ್ಲಿಸುವಲ್ಲಿ ಕ್ರಮ ವಹಿಸಿದೆ.
5. ಭದ್ರಾವತಿಯಲ್ಲಿರುವ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ವಿ.ಐ.ಎಸ್.ಎಲ್. ಕಾರ್ಖಾನೆ ಹಾಗೂ ಎಂ.ಪಿ.ಎಂ. ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ.
6. ಶಿವಮೊಗ್ಗದಲ್ಲಿ 100 ಹಾಸಿಗೆಗಳ ಇ.ಎಸ್.ಐ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಂಜೂರಾತಿಗೆ ಕೇಂದ್ರ ಕಾರ್ಮಿಕ ಸಚಿವರಾದ ಮಾನ್ಯ ಶ್ರೀ ಆಸ್ಕರ್ ಫರ್ನಾಂಡೀಸ್‍ರನ್ನು ಭೇಟಿ ಮಾಡಿ ಒತ್ತಾಯಿಸಿದ್ದರ ಫಲವಾಗಿ, ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ಕು ಡಿಸ್ಪೆನ್ಸರಿಗಳನ್ನು (ಶಿವಮೊಗ್ಗದಲ್ಲಿ 2, ಭದ್ರಾವತಿಯಲ್ಲಿ 2) ಪ್ರಾರಂಭಿಸುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಇಎಸ್‍ಐ ಮೆಡಿಕಲ್ ಸರ್ವೀಸಸ್, ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದಾರೆ.
7. ಅಡಿಷನಲ್ ಸಾಲಿಸಟರ್ ಜನರಲ್ ಇಂದಿರಾ ಜೈಸಿಂಗ್‍ರವರು ಸುಪ್ರಿಂ ಕೋರ್ಟಗೆ ಅಡಿಕೆ ಬೆಳೆ ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿ ನೀಡಿರುವುದರಿಂ ಅಡಿಕೆ ನಿಷೇದ ಮಾಡದತೆ ತಾಲ್ಲೂಕು/ಜಿಲ್ಲಾ/ಕೇಂದ್ರ ಮಟ್ಟದಲ್ಲಿ ಹೋರಾಟ.
1
2
3
4
5
6
7
8