ಶಿಕಾರಿಪುರ ಶಾಸಕರಾದ ನಂತರದ ಅವಧಿಯ ಪ್ರಮುಖ ಅಭಿವೃದ್ಧಿ ಯೋಜನೆಗಳು

 • ಶಾಸಕರಾಗಿ ಕಳೆದ ಒಂದು ವರೆ ವರ್ಷಗಳಲ್ಲಿ ಕ್ಷೇತ್ರದ ಮೂಲ ಭೂತ ಸೌಕರ್ಯಗಳಿಗೆ ಒತ್ತು ನೀಡಿ ಶಿಕಾರಿಪುರ ತಾಲ್ಲೂಕನ್ನು ಮಾದರಿ ತಾಲ್ಲೂಕು ಮಾಡುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಯತ್ತ ಕಾರ್ಯ ಪ್ರವೃತ್ತರಾಗಿದ್ದಾರೆ.
 • ತಾಲ್ಲೂಕಿನ 4 ಗ್ರಾಮಗಳಿಗೆ (ಕೆಂಗಟ್ಟೆ, ಸುರಗಿಹಳ್ಳಿ, ತಾಳಗುಂದ, ಮುಡಬ ಸಿದ್ದಾಪುರ) ಗ್ರಾಮ ವಿಕಾಸ ಯೋಜನೆಯಲ್ಲಿ 3 ಕೋಟಿ 74 ಲಕ್ಷ ಮಂಜೂರಾಗಿದೆ.
 • ಕರ್ನಾಟಕ ನೀರಾವರಿ ನಿಗಮ ನಿಯಮಿತ – ಶಿಕಾರಿಪುರ ತಾಲ್ಲೂಕು ಅಂಜನಾಪುರ ಮತ್ತು ಅಂಬ್ಲಿಗೊಳ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ 2014-15 ನೇ ಸಾಲಿನ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಒಟ್ಟು 53.8 ಲಕ್ಷ ವೆಚ್ಚದ ಕಾಮಗಾರಿಗಳಿಕೆ ಅನುಮೋದನೆ ದೊರಕಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
 • ಶಿಕಾರಿಪುರ ತಾಲ್ಲೂಕಿನ ಸಣ್ಣ ನೀರಾವರಿ ಉಪ ವಿಭಾಗ 2015ರ ನಬಾರ್ಡ ಹಾಗು ನಬಾರ್ಡೇತರ ಕಾಮಗಾರಿಗಳಿಗೆ 3 ಕೋಟಿ 30 ಲಕ್ಷ ಮಂಜೂರಾಗಿದ್ದು ಇದರಲ್ಲಿ 1 ಕೋಟಿ 45 ಲಕ್ಷದ ಕಾಮಗಾರಿ ಮುಕ್ತಾಯಗೊಂಡಿದ್ದು, ಬಾಕಿ ಕಾಮಗಾರಿ ಪ್ರಗತಿಯಲ್ಲಿದೆ.
 • ಶಿಕಾರಿಪುರ ತಾಲ್ಲೂಕಿನ ಸಣ್ಣ ನೀರಾವರಿ ಉಪ ವಿಭಾಗದ 2015-16 ನೇ ಸಾಲಿನ ಎಸ್.ಸಿ.ಪಿ ಕಾಮಗಾರಿಗಳಿಗೆ 1 ಕೋಟಿ 30 ಲಕ್ಷ ಮತ್ತು ಟಿ.ಎಸ್.ಪಿ ಕಾಮಗಾರಿಗಳಿಗೆ 50 ಲಕ್ಷ ಮಂಜೂರಾಗಿದೆ.

2014-2015 ನೇ ಸಾಲಿನ ವಿವಿಧ ಅನುದಾನದಲ್ಲಿ ಆಗಿರುವ ಒಟ್ಟು ಕಾಮಗಾರಿಗಳ ವಿವರ,

 • ಸಾರ್ವಜನಿಕ ಸಮುದಾಯ ಭವನ ನಿರ್ಮಾಣಕ್ಕೆ 52 ಲಕ್ಷ 26 ಸಾವಿರ.
 • ಅಂಗನವಾಡಿ ಮತ್ತು ಶೌಚಾಲಯಗಳ ನಿರ್ಮಾಣಕ್ಕೆ 93 ಲಕ್ಷ 91 ಸಾವಿರ.
 • ರಸ್ತೆ ಮತ್ತು ಒಳ ಚರಂಡಿ ನಿರ್ಮಾಣಕ್ಕೆ 5 ಕೋಟಿ 86 ಲಕ್ಷ ವೆಚ್ಚದ ಕಾಮಗಾರಿ.
 • ಚಾನೆಲ್ ಮತ್ತು ಕೆರೆಗಳ ದುರಸ್ಥಿ ಕಾರ್ಯಕ್ಕೆ 1 ಕೋಟಿ 64 ಲಕ್ಷ 65 ಸಾವಿರ ವೆಚ್ಚದಲ್ಲಿ ಕಾಮಗಾರಿ.
 • ಕಿರು ಸೇತುವೆ/ಭೋರ್ ವೆಲ್/ ಹೊಂಡಗಳ ದುರಸ್ಥಿ ಕಾರ್ಯಕ್ಕೆ 35 ಲಕ್ಷ ರೂಗಳ ಕಾಮಗಾರಿ.
 • ಜಿಲ್ಲಾ ಪಂಚಾಯತ್ ಅನುದಾನದ ಅಡಿಯಲ್ಲಿ ಬಾಕ್ಸ ಚರಂಡಿ, ಬಯಲು ರಂಗ ಮಂದಿರ, ಶಾಲೆ ದುರಸ್ತಿ, ಕ್ರೀಡಾಂಗಣಗಳ ಅಭಿವೃದ್ಧಿಗೆ 26 ಲಕ್ಷ
 • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗು ಸಾಮಾನ್ಯ ವರ್ಗದ ಇತರೆ ಅಭಿವೃದ್ಧಿ ಕಾರ್ಯಗಳಿಗೆ 40 ಲಕ್ಷ
 • 2014-15 ರ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 43 ಲಕ್ಷ
 • 2014-15 ನೇ ಸಾಲಿನ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆ ಅಡಿ 60 ಲಕ್ಷದ ಕಾಮಗಾರಿಗಳು
 • ಕೆರೆಗಳ ವಾರ್ಷಿಕ ನಿರ್ವಹಣೆಗೆ 35 ಲಕ್ಷ
 • ತಾಲ್ಲೂಕಿನ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಟಾಸ್ಕ ಪೋರ್ಸ ಯೋಜನೆಯಡಿ 48 ಲಕ್ಷ

2015-16 ನೇ ಸಾಲಿನ ಕಾಮಗಾರಿಗಳ ವಿವರ.

 • 2015-16 ನೇ ಸಾಲಿನ 2 ಕೋಟಿ ಶಾಸಕರ ನಿಧಿಗೆ ಕ್ರೀಯಾ ಯೋಜನೆ ಸಲ್ಲಿಸಲಾಗಿದೆ.
 • ಶಿಕಾರಿಪುರ ತಾಲ್ಲೂಕಿನಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ರಸ್ತೆಗಳಿಗೆ 350 ಲಕ್ಷ ರೂಗಳ ವೆಚ್ಚದಲ್ಲಿ ಸುಧಾರಣೆ ಕಾರ್ಯ ಪ್ರಗತಿಯಲ್ಲಿದೆ.
 • ತಾಲ್ಲೂಕಿನಲ್ಲಿರುವ ಜಿಲ್ಲಾ ಮುಖ್ಯ ರಸ್ತೆಗೆ ಸಂಬಂಧಿಸಿದ ಸೇತುವೆಗಳ ನಿರ್ಮಾಣ/ಮರು ನಿರ್ಮಾಣ/ದುರಸ್ಥಿ ಕಾರ್ಯಕ್ಕೆ 225 ಲಕ್ಷ ರೂಗಳ ಕಾಮಗಾರಿ ಪ್ರಗತಿಯಲ್ಲಿದೆ.
 • ತಾಲ್ಲೂಕಿನ ಜಿಲ್ಲಾಮಟ್ಟದ ಮತ್ತು ಇತರೆ ರಸ್ತೆಗಳ ನವೀಕರಣಕ್ಕೆ 425 ಲಕ್ಷ ರೂಗಳ ಕಾರ್ಯ ಪ್ರಗತಿಯಲ್ಲಿದೆ.
 • 2015-16 ನೆ ಸಾಲಿನ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆ ಅಡಿ 48 ಲಕ್ಷದ ಕಾಮಗಾರಿಗಳು ಪ್ರಗತಿಯಲ್ಲಿದೆ
 • ಎಸ್.ಸಿ.ಪಿ ಯೋಜನೆ ಅಡಿ ತಾಲ್ಲೂಕಿನ ಛಲವಾದಿ/ಭೋವಿ/ಎ.ಕೆ ಕಾಲೋನಿ/ಬಣಜಾರ್ ತಾಂಡಗಳ ಕಾಂಕ್ರೀಟ್ ರಸ್ತೆ, ಡ್ರೈನೇಜ್ಗಳ ನಿರ್ಮಾಣ ಕಾರ್ಯಕ್ಕೆ 410 ಲಕ್ಷಗಳ ಕಾಮಗಾರಿ ಹಾಗು ಟಿ.ಎಸ್.ಪಿ ಯೋಜನೆ ಅಡಿಯಲ್ಲಿ5 ಲಕ್ಷಗಳ ಕಾಮಗಾರಿ ಪ್ರಗತಿಯಲ್ಲಿದೆ.