About Me

ಶ್ರೀ ಬಿ.ವೈ. ರಾಘವೇಂದ್ರ, ವಿಧಾನಸಭಾ ಸದಸ್ಯರು, ಶಿಕಾರಿಪುರ ಕ್ಷೇತ್ರ
ಇವರ ಪರಿಚಯ
ಹೆಸರು: ಬಿ.ವೈ.ರಾಘವೇಂದ್ರ.
ಜನ್ಮ ದಿನಾಂಕ: 16ನೇ ಆಗಸ್ಟ್ 1973.
ಸಾಮಾಜಿಕ ಜವಾಬ್ದಾರಿಗಳು:
 • ಶಾಸಕರು, ಶಿಕಾರಿಪುರ ಕ್ಷೇತ್ರ.
 • ಮಾಜಿ ಲೋಕಸಭಾ ಸದಸ್ಯರು, ಶಿವಮೊಗ್ಗ.
 • ಮ್ಯಾನೇಜ್‍ಮೆಂಟ್ ಟ್ರಸ್ಟೀ, ಪ್ರೇರಣಾ ಎಡುಕೇಷನಲ್ & ಸೊಷಿಯಲ್ ಟ್ರಸ್ಟ, ಶಿವಮೊಗ್ಗ.
 • ಕಾರ್ಯದರ್ಶಿಗಳು, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ (ರಿ), ಶಿಕಾರಿಪುರ.
 • ಮ್ಯಾನೇಜ್‍ಮೆಂಟ್ ಟ್ರಸ್ಟೀ, ಶ್ರೀಮತಿ ಗಂಗಮ್ಮ ವೀರಭದ್ರ ಶಾಸ್ತ್ರಿ ಸ್ಮಾರಕ ಟ್ರಸ್ಟ (ರಿ), ಶಿಕಾರಿಪುರ.
ಶಿಕ್ಷಣ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಿಕಾರಿಪುರದ ಲಯನ್ಸ ಮತ್ತು ಬೆಂಗಳೂರಿನ ಜನ ಸೇವಾ ವಿಧ್ಯಾ ಕೇಂದ್ರ ಶಾಲೆಯಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಶಿವಮೊಗ್ಗ ಡಿ.ವಿ.ಎಸ್. ಕಾಲೇಜಿನಲ್ಲಿ ಹಾಗೂ ಬಿ.ಬಿ.ಎಂ. ಶಿಕ್ಷಣವನ್ನು ಶಿವಮೊಗ್ಗ ಆಚಾರ್ಯ ತುಳಸಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾಲೇಜಿನಲ್ಲಿ ಅಭ್ಯಾಸ.
ವಿಳಾಸ:  ಬಿ.ವೈ.ರಾಘವೇಂದ್ರ, ಶಾಸಕರು, ಮೈತ್ರಿ ನಿಲಯ, ಶಿಕಾರಿಪುರ – 577427.
 ಮೈತ್ರಿ ನಿಲಯ, 7 ನೇ ಅಡ್ಡ ರಸ್ತೆ, 3ನೇ ಹಂತ, 2 ನೇ ಬ್ಲಾಕ್, ವಿನೋಬನಗರ, ಶಿವಮೊಗ್ಗ – 577201.

 

ನಡೆದು ಬಂದ ಹಾದಿ
 • 2014 ರ ಆಗಸ್ಟನಲ್ಲಿ ನಡೆದ ಶಿಕಾರಿಪುರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
 • 2009 ರ ಮೇ ತಿಂಗಳಲ್ಲಿ ನಡೆದ 15ನೇ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪರವರ ವಿರುದ್ಧ ಜಯ ಸಾಧಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಹುಮತದಿಂದ ಆಯ್ಕೆಯಾಗಿ ರಾಷ್ಟ್ರ ರಾಜಕೀಯಕ್ಕೆ ಪ್ರವೇಶ ಮಾಡಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನ ಗೊಳಿಸಿದರು.
 • ಅಕ್ಟೋಬರ್ 8, 2012 ರಂದು 6 ವರ್ಷಗಳ ಅವಧಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಸಮಿತಿ ಸದಸ್ಯರಾಗಿ ಆಯ್ಕೆ.
 • ಸೆಪ್ಟಂಬರ್ 26, 2010ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ.
 • 2008 ರಲ್ಲಿ ರಾಜ್ಯದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಪ್ರೇರಣಾ ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್ ಮೂಲಕ ಶಿವಮೊಗ್ಗದಲ್ಲಿ :
  • PES Institute of Technology and Management
  • PES Public School
  • PES Institute of Advanced Management Studies
  • PES Pre-University College
  • PES PolyTechnic
 • ಕಾಲೇಜಗಳನ್ನು ಪ್ರಾರಂಭಿಸಿ ತನ್ಮೂಲಕ ಪಬ್ಲಿಕ್ ಸ್ಕೂಲ್, ಡಿಪ್ಲಮೋ, ಪಿಯು ಕಾಲೇಜು, ಬಿಬಿಎಂ, ಇಂಜಿನಿಯರಿಂಗ್, ಹಾಗೂ ಎಂಬಿಎ ಕಾಲೇಜುಗಳ ಮ್ಯಾನೆಜಿಂಗ್ ಟ್ರಸ್ಟಿ ಆಗಿ ಕಾರ್ಯ ನಿರ್ವಹಣೆ.
 • 2007ರಲ್ಲಿ ಪ್ರಥಮ ಬಾರಿಗೆ ರಾಜಕಿಯ ಕ್ಷೇತ್ರವನ್ನು ಪ್ರವೇಶಿಸಿ ಶಿಕಾರಿಪುರ ದೊಡ್ಡಪೇಟೆಯ ಪುರಸಭಾ ಸದಸ್ಯರಗಿ ಆಯ್ಕೆ.
 • 1997 ರಲ್ಲಿ ಶ್ರೀಮತಿ ತೇಜಸ್ವಿನಿ ಇವರೊಂದಿಗೆ ವಿವಾಹ, ಸುಭಾಷ್ ಹಾಗು ಭಗತ್ ಎಂಬ ಇಬ್ಬರು ಗಂಡು ಮಕ್ಕಳು.
 • 1996 ರಿಂದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೂಲಕ ಶಿಕಾರಿಪುರದಲ್ಲಿ :
 • ಕಾಲೇಜುಗಳನ್ನು ಪ್ರಾರಂಭಿಸಿ ತನ್ಮೂಲಕ ಪ್ರಾಥಮಿಕ ಶಿಕ್ಷಣ/ ಪ್ರೌಢಶಿಕ್ಷಣ/ ಪದವಿಪೂರ್ವ ಶಿಕ್ಷಣ/ ಡಿಎಡ್ ಕಾಲೇಜು/ ಬಿಎಡ್ ಕಾಲೇಜು/ ನರ್ಸಿಂಗ್ ಕಾಲೇಜುಗಳ ಕಾರ್ಯದರ್ಶಿಯಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಯಶಸ್ವಿಯಾಗಿ ನಡೆಸುತ್ತಿದ್ದಾರೆ.
 • 1995 ರಿಂದ ಶ್ರೀಮತಿ ಗಂಗಮ್ಮ ವೀರಭದ್ರಶಾಸ್ತ್ರಿ ಸ್ಮಾರಕ ಟ್ರಸ್ಟ್ (ರಿ) ಅಡಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸುವ ಸದುದ್ದೇಶದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ.
 • 1993 ನೇ ಸಾಲಿನ ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ.

Click Here To Download B.Y.Raghavendra Brochure

**********  ಧನ್ಯವಾದಗಳು  **********