ಅಶ್ರುತರ್ಪಣ

ಕುರುಬ ಸಮಾಜದ ಮುಖಂಡ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾಗಿದ್ದ ಶ್ರೀ ಎಸ್.ವಿ. ತಿಮ್ಮಯ್ಯನವರು ದಿನಾಂಕ: 31.12.2013 ರಂದು ಮಧ್ಯಾಹ್ನ ದೈವಾಧೀನರಾದ ವಿಷಯ ತಿಳಿದು ತುಂಬಾ ದುಃಖವಾಯಿತು.

ಓದಿದ್ದು ಕಾನೂನು ಪದವಿಯಾಗಿದ್ದರೂ, ಶಿಕ್ಷಣ ಪ್ರಸಾರದ ಕೈಂಕರ್ಯವನ್ನು ಮಾಡುತ್ತಿದ್ದ ತಿಮ್ಮಯ್ಯನವರು ಉತ್ತಮ ವಾಗ್ಮಿಗಳಾಗಿದ್ದರು. ನಾಡಿನ ಪ್ರತಿಷ್ಠಿತ ಸಂಸ್ಥೆಗಳ ಪೈಕಿ ಒಂದಾಗಿದ್ದ ರಾಷ್ಟ್ರೀಯ ವಿದ್ಯಾ ಸಂಸ್ಥೆಯನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದರು. ಸಾವಿರಾರು ಪುಸ್ತಕಗಳ ಭಂಡಾರವನ್ನೆ ಮನೆಯಲ್ಲಿ ಹೊಂದಿದ್ದ ಶ್ರೀಯುತರು ಯಾವುದೇ ವಿಷಯದ ಬಗ್ಗೆಯಾದ್ರೂ ಅದನ್ನು ಆಳವಾಗಿ ಆಭ್ಯಸಿಸಿ ಮಾತನಾಡುತ್ತಿದ್ದರಿಂದ ಉತ್ತಮ ಉಪನ್ಯಾಸಕರಾಗಿ ಹೆಸರುಗಳಿಸಿದ್ದರು. ಹಲವಾರು ಸಂಸ್ಥೆಗಳಲ್ಲಿ ದುಡಿದಿದ್ದ ಶ್ರೀಯುತರು ಉತ್ತಮ ಸಹಕಾರಿಗಳಾಗಿದ್ದರು ಹಾಗೂ ರಾಜಕೀಯವಾಗಿಯೂ ಉತ್ತಮ ಸ್ಥಾನ ಗಳಿಸಿದ್ದರು.

ಅಪಾರ ಬಂಧು ಬಳಗ, ಶಿಷ್ಯವೃಂದವನ್ನು ಅಗಲಿರುವ ಶ್ರೀಯುತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಭಗವಂತ ದಯಪಾಲಿಸಲೆಂದು ಹಾಗೂ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.

ತಮ್ಮ ವಿಶ್ವಾಸಿ,
ಸಹಿ/-
(ಬಿ.ವೈ.ರಾಘವೇಂದ್ರ)



Leave a Reply